ಚಳ್ಳಕೆರೆ : ಕಳೆದ ಮೂವತ್ತು ದಿನಗಳಿಂದ ಮನಸ್ಸನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಅಲ್ಲಾವುನಾ ಪ್ರಾರ್ಥನೆ ಸಲ್ಲಿಸಿ, ತಾವು ದುಡಿದ ಹಣದಲ್ಲಿ ದಾನ ಮಾಡುವ ಪ್ರವೃತ್ತಿ ನಿಜಕ್ಕೂ ಶಾಘ್ಲನೀಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬಕ್ಕೆ ನೆರೆದಿದ್ದ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತಮ ಮನುಷ್ಯನ ನೆಮ್ಮದಿ ಕಟ್ಟಿಕೊಳ್ಳುವ ಮುಸ್ಲಿಂ ಭಾಂಧವರು ವಿಶ್ವದ್ಯಾಂತ ಆಚರಿಸುವ ಈ ರಂಜಾನ್ ಹಬ್ಬ ಶಾಂತಿ ಸಂಕೇತದ ಪ್ರತಿಕವಾಗಿದೆ, ಬಡವರಿಗೆ ದಾನ ಮಾಡುವ ಮೂಲಕ ಹಬ್ಬವನ್ನು ಆಚರಿಸುವುರು ಆ ಭಗವಂತ ಸಮಾಜದ ಎಲ್ಲಾ ವರ್ಗ ಜನರಿಗೆ ಒಳಿತನ್ನು ಮಾಡಲಿ ಎಂದು ರಂಜಾನ್ ಹಬ್ಬದ ಶುಭಾಚಯಗಳನ್ನು ಕೋರಿದರು.
ಶಾಂತಿಯ ಸ್ನೇಹ ಸಂಕೇತವಾದ ರಂಜಾನ್ ಹಬ್ಬಕ್ಕೆ ತಾಲೂಕಿನ ಎಲ್ಲಾ ಮುಸ್ಲಿಂ ಬಾಂಧವರು ಇಂದು ಮುಂಜಾನೇ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್, ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಆಗಮಿಸಿ ಮುಸ್ಲಿಂ ಸಮುದಾಯವರೊಂದಿಗೆ ಬೆರೆತು ಪ್ರಾರ್ಥನೆ ಸಲ್ಲಿಸಿ ನಂತರ ರಂಜಾನ್ ಹಬ್ಬದ ಶುಭಾಷಯಗಳನ್ನು ಕೂಡ ಕೋರಿದರು.

About The Author

Namma Challakere Local News
error: Content is protected !!