ಚಳ್ಳಕೆರೆ : ಕಳೆದ ಹತ್ತು ವರ್ಷದ ಅಬಿವೃಧಿಗೆ ನೀಡಿದ ಶಿಕ್ಷಣ ಹಾಗೂ ರೈತರ ಜೀವನಾಡಿಗೆ ಒತ್ತು ನೀಡಿದ ಅಂಶಗಳಿಗೆ ಈಬಾರಿ ಮತದಾರರು ಮೂರನೇ ಬಾರಿಗೆ ಆಯ್ಕೆ ಮಾಡುವ ವಿಶ್ವಾಸ ನನಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ಕ್ಷೇತ್ರದ ನಗರ ಪ್ರದೇಶದಲ್ಲಿ ಮತಯಾಚನೆ ಮುಗಿಸಿ ಈಗ ಕ್ಷೇತ್ರದ ಗ್ರಾಮಗಳತ್ತ ಮುಖ ಮಾಡಿದ ಶಾಸಕರು ಮೊದೂರು, ಕಾಮಸಮುದ್ರ, ನಾಗಗೊಂಡನಹಳ್ಳಿ ಈಗೇ ಹಲವು ಗ್ರಾಮಗಳಲ್ಲಿ ಬೀಡು ಬಿಟ್ಟ ಶಾಸಕರು ಈ ಭಾರಿ ಕಾಂಗ್ರೇಸ್ ಗೆ ಮತ ನೀಡುವಂತೆ ಮತದಾರರಲ್ಲಿ ಮತಬೇಟೆ ಮಾಡಿದರು,
ಇನ್ನೂ ಬಯಲು ಸೀಮೆಯ ಹಸಿರುಕರಣಕ್ಕೆ ಒತ್ತು ನೀಡಿದ ನಾವು ಎರಡು ಅವಧಿಯಲ್ಲಿ ಮಾದರಿ ತಾಲೂಕಿಗೆ ಪಣತೊಟ್ಟಿದ್ದೆವೆ ಅದರಂತೆ ಇನ್ನೂ ಮೂರನೇ ಬಾರಿಗೆ ನಿಮ್ಮ ಸೇವೆ ಮಾಡಲು ಸಿದ್ದರಿದ್ದೆವೆ ಎಂದರು.
ಜನ ಪರ ಯೋಜನೆಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ ತಾಲೂಕಿನ ಪರಶುರಾಂಪುರ ಗ್ರಾಮದಲ್ಲಿ ಸ್ವಯಂ ಪ್ರೇರಿತರಾಗಿ ಬಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಹಾಗೂ ವಿಧಾಸನ ಸಭೆ ಚುನಾವಣೆ ಮತಯಾಚನೆ ಮಾಡುತ್ತಿದ್ದಾರೆ.
ಸರಕಾರದ ಅಡಿಯಲ್ಲಿ ಬರುವ ಸುಮಾರು ಇಲಾಖೆಗಳ ಕಾರ್ಯಕ್ರಗಮನ್ನು ಎಲ್ಲಾ ವರ್ಗದ ಬಡ ಜನರಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕಾಂಗ್ರೆಸ್ ಸರಕಾರ ಅವಧಿಯಲ್ಲಿ ರಾಜ್ಯದಲ್ಲಿ ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ಆಶ್ರಯ, ಅಂಬೇಡ್ಕರ್, ಸೇರಿದಂತೆ ವಿವಿಧ ವಸತಿ ಯೋಜನೆಯಡಿ ಕ್ಷೇತ್ರದಲ್ಲಿ ಸಾಕಷ್ಟು ವಸತಿ ಸೌಲಭ್ಯ ಕಲ್ಪಿಸಿದ್ದು. ಬಿಜೆಪಿ ಸರಕಾರದಲ್ಲಿ ಮನೆಗಳನ್ನು ನೀಡಿಲ್ಲ ನಾನು ಕಾಂಗ್ರೆಸ್ ಶಾಸಕ ಎಂದು ಕ್ಷೆತ್ರದಕ್ಕೆ ಅನುದಾನ ಬಿಡುಗಡೆ ಮಾಡಿದ ಅನುದಾನ ಹಿಂಪಡೆದಿದ್ದಾರೆ ಇದರಿಂದ ಅಭಿವೃದ್ಧಿಗೆ ಸ್ವಲ್ಪ ಹಿನ್ನೆಡೆಯಾಗಿದೆ.
ಅದರೂ ಸಹ ಇದಲ್ಲದೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರ ವ್ಯಾಪ್ತಿಯ ಸಾರಿಗೆ ಬಸ್‌ನಿಲ್ದಾಣ, ಮಿನಿ ವಿಧಾನರ್ಸೌ, ಮಹಿಳಾ ಮಕ್ಕಳ ಆಸ್ಪತ್ರೆ, ರಂಗಮAದಿರ, ದೇವರಾಜ್ ಅರಸು ಭವನ, ಪರಶುರಾಂಪುರ ಹೋಬಳಿ ಕೇಂದ್ರದಲ್ಲಿ ಐ ಟಿ.ಐ ಕಾಲೇಜು ಸ್ಥಾಪನೆ ಶಾಸಕನಾಗಿ ಆಯ್ಕೆಯಾದ ದಿನದಿಂದ 10 ವರ್ಷಗಳ ಅವಧಿಯಲ್ಲಿ ಸಹಕಾರದಿಂದ ಸಾರ್ವಜನಿಕರ ಅವಶ್ಯಕತೆಗಳನ್ನು ಅರಿತು ಸಮಯ ಪ್ರಜ್ಞೆಯಿಂದ ನಾನು ಕರ್ತವ್ಯವನ್ನು ನಿರ್ವಹಿಸಿದ್ದೇನೆ ಮತ್ತೊಮ್ಮೆ ನಿಮ್ಮ ಮುಂದೆ ಮತಯಾಚನೆ ಮಾಡಲು ಬಂದಿದ್ದೇನೆ ಮತ್ತೋಮ್ಮೆ ಮತದಾರ ಆರ್ಶೀವಾದ ಮಾಡುವಂತೆ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಈ ಬಾರಿಯೂ ನಾನು ಶಾಸಕ ನಾಗುವುದು ಖಚಿತ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ ಮಾತನಾಡಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಬರುವುದು ಖಚಿತ ಪರಶುರಾಂಪುರ ಹೋಬಳಿ ಕೇಂದ್ರ ತಾಲೂಕು ಆಗುವುದು ಖಚಿತ ಮತ್ತೊಮ್ಮೆ ಶಾಸಕ ಟಿ.ರಘುಮೂರ್ತಿಯವರಿಗೆ ಮತನೀಡಿ ವಿಧಾನಸೌಧಕ್ಕೆ ಕಳಿಸುವಂತೆ ಮನವಿ ಮಾಡಿಕೊಂಡರು.
ಇದೇ ಸಂಧರ್ಭದಲ್ಲಿ ಹಲವು ಕಾಂಗ್ರೆಸ್ ಮುಖಂಡರು ಪ್ರಚಾರದಲ್ಲಿ ತೊಡಗಿದ್ದರು.