ರಾಜ್ಯದಲ್ಲಿ ಈ ಬಾರಿ 2023ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ : ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿಕೆ

ಚಳ್ಳಕೆರೆ : ರಾಜ್ಯದಲ್ಲಿ ಈ ಬಾರಿ 2023ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ದ ಆದ್ದರಿಂದ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿಸಲು ಈ ಬಾರಿ ಮತದಾರರು ಒಲವು ತೋರುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದರು.
ಅವರು ನಗರದ 21ನೇ ವಾರ್ಡ್ ಹಾಗೂ 14ನೇ ವಾರ್ಡ್ಗಳಿಗೆ ತೆರಳಿದ ಅವರು, ಶ್ರೀ ಸಾಯಿಬಾಬ ರಸ್ತೆ, ಕುಬೇರ ನಗರ, ಕುಲುಮೆ ರಸ್ತೆ ಗಾಂಧಿನಗರ ಎಸ್ ಆರ್ ರೋಡ್ ಈಗೇ ದಿನವೀಡಿ ಮತಯಾಚನೆ ಮಾಡುವ ಅಭ್ಯರ್ಥಿ ಎಂ.ರವೀಶ್ ಕುಮಾರ್ ಮನೆ ಮನೆಗೆ ತೆರಳಿ ಜೆಡಿಎಸ್ ಪಕ್ಷದ ಪ್ರಮುಖವಾದ ಪಂಚರತ್ನ ಯೋಜನೆಯ ಅಜೆಂಡವನ್ನು ಮನವರಿಕೆ ಮಾಡುತ್ತಾ ಮತಯಾಚನೆ ಮಾಡಿವ ಸಮಯದಲ್ಲಿ ಮಾತನಾಡಿದರು ಅದರಂತೆ ನಮ್ಮ ಪಕ್ಷದ ಪಂಚರತ್ನ ಯೋಜನೆಗಳು ಈ ಭಾರಿ ಮತದಾರರಿಗೆ ಪೂರಕವಾಗಿವೆ ಆದ್ದರಿಂದ ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ಬಯಸುತ್ತಿದ್ದಾರೆ, ಕ್ಷೇತ್ರದಲ್ಲಿ ಜೆಡಿಎಸ್ ಗೆಲವು ನಿಶ್ಚಿತ ಎಂದರು.

ಇದೇ ಸಂಧರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ಮಾಜಿ ಶಾಸಕ ಬಸವರಾಜ್ ಮಂಡಿಮಠ್, ನಗರಸಭೆ ಸದಸ್ಯ ಶ್ರೀನಿವಾಸ್, ವಿ.ವೈ.ಪ್ರಮೋದ್, ನಿರ್ಮಾಲ, ಮಾಜಿ ನಗರಸಭೆ ಉಪಾಧ್ಯಕ್ಷ ಟಿ.ವಿಜಯ್ ಕುಮಾರ್, ನಾಗರಾಜ್, ಭಿಮಣ್ಣ, ವೆಂಕಟೇಶ್ ಇತರರು ಸಾಥ್ ನೀಡಿದ್ದಾರೆ.

About The Author

Namma Challakere Local News
error: Content is protected !!