ಚಳ್ಳಕೆರೆ ; ತಾಲೂಕು ಸ್ವೀಪ್ ಸಮಿತಿ ಮೂಲಕ ಶೇ 100 ರಷ್ಟು ಮತದಾನ ಗುರಿ ತಲುಪುವ ನಿಟ್ಟಿನಲ್ಲಿ ಮತದಾನದ ಜಾಗೃತಿ ಸ್ವೀಪ್ ಸಮತಿ ಕೈಗೊಂಡ ಪ್ರಚಾರದಲ್ಲಿ ವಿವಿಧ ಆಯಾಮಗಳ ಮೂಲಕ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಕೆ. ಹೊನ್ನಯ್ಯ ಆಯೋಜಿಸಿದ್ದಾರೆ.
ಅದರಂತೆ ಇಂದು ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಜಾಗೃತಿಗೆ ವಿದ್ಯಾರ್ಥಿಗಳಿಂದ ರಂಗೋಲಿ ಸ್ಪರ್ಧೆ, ಕ್ವೀಜ್ ಕಾರ್ಯಕ್ರಮ, ಚಿತ್ರಕಲೆ ವಿವಿಧ ಸ್ವರ್ಧೆ ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಯುವ ಮತದಾರರಿಂದ ಮತದಾನ ಜಾಗೃತಿಯ ಪ್ರತಿಜ್ಞಾನ ವಿಧಿಯನ್ನು ಬೋಧಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದರು ಅವರು ವಿಧಾನ ಸಭಾ ಚುನಾವಣೆಯಲ್ಲಿ ಶೇ 100 ರಷ್ಟು ಮತದಾನ ಮಾಡಿಸುವ ಗುರಿಯೊಂದಿಗೆ ಜಾಗೃತಿ ಮೂಡಿಸಲು ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ರಾಜಕೀಯ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗಿAದ ಮತದಾನ ಜಾಗೃತಿಗೆ ಚುನಾವಣೆ ಆಯೋಗ ರಾಜಕೀಯ ಪಕ್ಷಗಳ ಪ್ರಚಾರ ವಾಹನಗಳು ಆಗೋಮ್ಮೆ ಈಗೊಮ್ಮೆ ಬಂದು ಹೋದರೆ ಸ್ವೀಪ್ ಸಮತಿಯ ಪ್ರಚಾರದ ಅಲೆಯೇ ಹೆಚ್ಚಾಗಿದೆ. ಸ್ವೀಪ್ ಸಮಿತಿ ನೇತೃತ್ವದಲ್ಲಿ ನಗರಸಭೆ ಕಸ ಸಂಗ್ರಹಿಸುವ ವಾಹನಗಳು ಕೂಡ ಚುನಾವಣಾ ಜಾಗೃತಿ ಹಾಡುಗಳ ಮೂಲಕ ಗಲ್ಲಿ ಗಲ್ಲಿ ರಸ್ತೆಗಳಲ್ಲಿ ಸುತ್ತಿತ್ತಿವೆ.
ವಿವಿಧ ಇಲಾಖೆಯ ಅಧಿಕಾರಿಗಳು, ಅಂಗನವಾಡಿ, ಆರೋಗ್ಯ ಇಲಾಖೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯರ್ತೆಯರು, ನಗರಸಭೆ, ತಾಪಂ, ಗ್ರಾಪಂ, ಶಿಕ್ಷಣ ಇಲಾಖೆ ಸಿಬ್ಬಂದಿಗಳು ಮೇ.10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಜನರಲ್ಲಿ ಅರಿವು ಮೂಡಿಸಲು ನಗರದ ಪ್ರಮುಖ ರಸ್ತೆ ಹಾಗೂ ನೆಹರು ವೃತ್ತದಲ್ಲಿ ಕ್ಯಾಂಡಲ್ ಇಡಿದು ಜಾಗೃತಿ ಮೂಡಿಸಿದೆ, ರಂಗೋಲಿ ಸ್ವರ್ಧೆ, ಚರ್ಚಾ ಸ್ವರ್ಧೆ, ಕ್ಷೀಜ್, ಚಿತ್ರಕಲೆ ಈಗೇ ವಿವಿಧ ಆಯಾಮಗಳಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಜಾಗೃತಿ ಕಾರ್ಯಕ್ರಮದಲ್ಲಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ತಾಪಂ ಇಒ ಜೆ.ಕೆ.ಹೊನ್ನಯ್ಯ, ತಾಪಂ.ಮ್ಯಾನೆಜರ್ ದಿವಕಾರ್, ಪ್ರವೀಣ್, ಮಧು, ಮಾರುತಿ, ಪ್ರಾಶುಂಪಾಲ ಡಾ.ಆರ್.ರಂಗಪ್ಪ, ಪ್ರಾಚಾರ್ಯ ತಿಪ್ಪೆಸ್ವಾಮಿ, ಲಕ್ಷö್ಮಣ್, ವಿದ್ಯಾರ್ಥಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!