ಚಳ್ಳಕೆರೆ : 2023ರ ವಿಧಾನ ಸಭೆ ಚುನಾವಣೆಗೆ ದಿನಾಂಕ ನಿಗಧಿಯಾಗಿದ್ದು ಈಗಾಗಲೇ ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿದ್ದು ಚುನಾವಣೆ ಆಯೋಗದ ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ ಏಪ್ರಿಲ್ 20 ರಂದು ಕೊನೆಗಳಲಿದೆ
ಇನ್ನೂ ಆಯಿಲ್ ಸಿಟಿಯಲ್ಲಿ ವಿವಿಧ ರಾಜಾಕೀಯು ಪಕ್ಷಗಳಿಂದ ಭರ್ಜರಿಯಾಗಿ ತಾಲೀಮು ನಡೆಸುತ್ತಿದ್ದಾರೆ ಇದರ ಜೊತೆಗೆ ಪಕ್ಷೇತರವಾಗಿ ಇಬ್ಬರು ಮಾತ್ರ ಪ್ರಚಾರದಲ್ಲಿ ತೊಡಗಿದ್ದಾರೆ ಅದರಂತೆ ಇಂದು ಮೊದಲನೇಯದಾಗಿ ಪಕ್ಷೇತರ ಅಭ್ಯರ್ಥಿಯಾಗಿ ಆರ್.ಅಂಜಮ್ಮ ಮೊದಲಿಗೆ ನಾಮಪತ್ರ ಸಲ್ಲಿಸಿದ್ದಾರೆ.
ತದನಂತರ ಕೆಆರ್‌ಎಸ್ ಪಕ್ಷದಿಂದ ಸಿ.ಬೋಜರಾಜ್ ಎಂಬುವವರು ನಾಮ ಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣೆ ಅಧಿಕಾರಿ ಬಿ.ಆನಂದ್ ತಿಳಿಸಿದ್ದಾರೆ.
ಆಯಿಲ್ ಸಿಟಿಯಲ್ಲಿ ಮೊದಲ ನಾಮಪತ್ರ ಮಹಿಳೆಯಿಂದ ಸಲ್ಲಿಕೆಯಾಗಿರುವುದು ಈ ಬಾರಿ ವಿಶೇಷವಾಗಿದೆ ಅದರಂತೆ ರಾಜಾಕೀಯ ಪಕ್ಷಗಳಿಂದ ಮೊದಲೇ ಪಕ್ಷೇತರವಾಗಿ ನಾಮ ಪತ್ರ ಸಲ್ಲಿಸಿರುವುದು ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ.