ಚಳ್ಳಕೆರೆ : ಮತದಾನ ಹಕ್ಕು‌ ನಮದು ಅಂತಹ ಮತದಾನ ದಿಂದ ನಾವು ಹಿಂದೆ ಸರಿಯಬಾರದು ಒಂದು ವೇಳೆ ನಿಮಗೆ ಸರಿಯಾದ ಅಭ್ಯರ್ಥಿ ಯಾರು ಇಲ್ಲವಾದರೆ ನೋಟ ಬಟನ್ ಒತ್ತುವ ಮೂಲಕ ಮತದಾನ ಮಾಡಬೇಕು ಯಾವುದೇ ಕಾರಣಕ್ಕೂ ಮತದಾನದಿಂದ‌ ಹಿಂದೆ ಸರಿಯಬಾರದು ಎಂದು ಸ್ವೀಪ್ ಸಮಿತಿ ತಾಲೂಕು ಅಧ್ಯಕ್ಷ ಹಾಗೂ ಇಓ.ಹೊನ್ನಯ್ಯ ಹೇಳಿದರು.

ಅವರು ನಗರದ ತಾಪಂ.ಆವರಣದಲ್ಲಿ ತಾಲೂಕು ಮಟ್ಟದ ಆಶಾ ಕಾರ್ಯಕರ್ತೆ ಯರು ಹಾಗೂ ಅಂಗನವಾಡಿ ಕಾರ್ಯಕರ್ತೆರೊಂದಿಗೆ ಮತದಾನ ಜಾಗೃತಿ ಸಭೆ ನಡೆಸಿ ನಂತರ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.

ಇನ್ನೂ ಕ್ಷೇತ್ರ ಶಿಕ್ಷಾಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಮತಗಟ್ಟೆ‌ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಮೂಡಿಸುವ ಮೂಲಕ ಯಾರು ಕೂಡ ಮತದಾನದಿಂದ‌ ವಂಚಿತರಾಗದೆ ಕಡ್ಡಾಯ‌ಮತದಾನಕ್ಕೆ ಪ್ರೇರೆಪಣೆ ಮಾಡಬೇಕು ಗ್ರಾಮೀಣ ಮಟ್ಟದ ಕಟ್ಟ ಕಡೆಯ ವ್ಯಕ್ತಿಗಳಿಗೂ ಚಿರಪರಿತರಾದ ಆಶಾ, ಅಂಗನವಾಡಿ ಕಾರ್ಯಕರ್ತರ ಪಾತ್ರ ಬಹು‌ಮುಖ್ಯವಾಗಿದೆ ಆದ್ದರಿಂದ ನಮ್ಮ‌ ಮನೆಯ ಕೆಲಸ ಎಂದು ಬಾವಿಸಿ ಮತದಾನ ಮಾಡಬೇಕು ಎಂದರು.

ಅದರಂತೆ ಸಿಡಿಪಿಓ ಹರಿಪ್ರಸಾದ್ ಮಾತನಾಡಿ, ಕ್ಷೇತ್ರದಲ್ಲಿ ಅತೀ‌ಕಡಿಮೆ ಮತದಾನವಾದ ಸುಮಾರು22 ಮತಗಟ್ಟೆಗಳಿಗೆ ಈಗಾಗಲೇ ಬೇಟಿ ನೀಡಿ ಮತದಾರರಿಗೆ ಜಾಗೃತಿ ಮೂಡಿಸಿದೆ ಅದರಂತೆಯೇ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು

ಈದೇ ಸಂಧರ್ಭದಲ್ಲಿ ತಾಪಂ.ಎಡಿ.ಸಂಪತ್ ಕುಮಾರ್, ಆರೋಗ್ಯ ಇಲಾಖೆ ತಿಪ್ಪೇಸ್ವಾಮಿ, ಪೌರಾಯುಕ್ತ ರಾಮಕೃಷ್ಣ, ಬಿಸಿಎಂ ಅಧಿಕಾರಿ ದಿವಕಾರ್, ಎಸ್ಟಿ ಇಲಾಖೆ ಅಧಿಕಾರಿ ಶಿವರಾಜ್, ಶಿಕ್ಷಕರಾದ ಪಾಲಯ್ಯ, ತಾಲೂಕು ಮಟ್ಟದ ಎಲ್ಲಾ ಆಶಾ ಕಾರ್ಯಕರ್ತೆಯರು, ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!