ಚಳ್ಳಕೆರೆ : ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಜಾತಿ, ಮತ, ಪಂಥ, ಧರ್ಮಗಳೆಂಬ ಮತ್ತಿನಿಂದ ಹೊರ ಬರಬೇಕು ಜನತಂತ್ರ ವ್ಯವಸ್ಥೆಯಲ್ಲಿ ಜನರೆ ನಿರ್ಣಯಕರು, ದೇಶ ಬಲಿಷ್ಟವಾಗಬೇಕಾದರೆ ಮತದಾರ ಪ್ರಭುಗಳು ಬಲಿಷ್ಠರಾಗಬೇಕು ಎಂಬ ಸಂದೇಶ ಸಾರಿದ ಅಂಬೇಡ್ಕರ್ ಜಯಂತಿ ಇಂದು ಸರಳವಾಗಿ ಆಚರಿಸುತ್ತಿದ್ದೆವೆ ಎಂದು ತಾಪಂ.ಇಓ. ಹೊನ್ನಯ್ಯ ಹೇಳಿದರು.
ಅವರು ನಗರದ ತಾಲೂಕು ಕಚೇರಿ ಮುಂಬಾಗದ ಅಂಬೆಡ್ಕರ್ ಪುತ್ಥಳಿಗೆ ಹೂವು ಮಾಲೆ ಅರ್ಪಿಸಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಕಛೇರಿಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಂತಿಯ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಬಾಬಾ ಸಾಹೇಬ್‌ರ ಹಾದಿಯಲ್ಲಿ ನಡೆಯದಿದ್ದರು ಅವರ ಹಾಕಿಕೊಟ್ಟ ಮಾರ್ಗಗಳ ಮೂಲಕ ಸಂವಿಧಾನದ ಹಕ್ಕುಗಳನ್ನು ಪಡೆಯುವ ಮೂಲಕ ಅವರ ನಿಲುವಿಗೆ ಬದ್ದರಾಗಬೇಕು, ಅಂಬೇಡ್ಕರ್ ಕಾಲವಾದ ದಿನಗಳಲ್ಲಿ ಪ್ರಪಂಚದ 193ದೇಶಗಳು ಮರುಗಿದ್ದವು ಅಂತಹ ಮಹಾನ್ ವ್ಯಕ್ತಿಗಳು ಬರೆದ ಕೊಟ್ಟ ಸಂವಿಧಾನ ನಾವು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.
ತಹಶೀಲ್ದಾರ್ ರೋಷನ್ ಪಾಷ ಮಾತನಾಡಿ, ಹಲವು ನೋವುಗಳನುಂಡು, ರಾಜಾಕೀಯವಾಗಿ, ಶೈಕ್ಷಣಿಕವಾಗಿ ಪ್ರಬುಧ್ದನಾಗಿ ಈಡೀ ದೇಶವೇ ಒಪ್ಪುವಂತ ಸಂವಿಧಾನ ರಚಿಸಿ ಇಂದು ನಮ್ಮ ಹೆಗಲಿಗೆ ಹಾಕಿ ಹೊಗಿದ್ದಾರೆ ಇದನ್ನು ಮುನ್ನಡೆಸಿಕೊಂಡು ಹೊಗುವ ಹೊಣೆಗಾರಿಕೆ ನಮ್ಮದಾಗಿದೆ, ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ತಮ್ಮದೇ ಆದ ವೃತ್ತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಆದರೆ ನೌಕರಿ ವರ್ಗದ ಆಡಳಿತ ಶಾಯಿಯಲ್ಲಿ ನಿವೃತ್ತಿ ಹೊಂದಿದ ಮೇಲೆ ಸಮಾಜದ ತಮ್ಮ ಜಾತಿ ವರ್ಗಗಳ ಮೇಲೆ ಆಧಮ್ಯೆ ಮೋಹದ ಮೂಲಕ ಸೇವೆ ಸಲ್ಲಿಸುವುದು ಉತ್ತಮ ಬೆಳವಣಿಗೆ ಆದರೆ ಈ ಬೆಳವಣಿಗೆ ಸೇವೆಯಲ್ಲಿರುವಾಗ ಸಲ್ಲಿಸಿದರೆ ಉತ್ತಮ ಎಂದರು.

ಇದೇ ಸಂಧರ್ಭದಲ್ಲಿ ಚುನಾವಣೆ ಅಧಿಕಾರಿ ಬಿ.ಆನಂದ್ , ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ರೇಹಾನ್ ಪಾಷಾ. ಸಮಾಜಕಲ್ಯಾಣಾಧಿಕಾರಿ ಮಂಜಪ್ಪ ,ಬಿಇಒ ಸುರೇಶ್, ಎಇಇ ಕಾವ್ಯ, ಕಾರ್ಮಿಕ ಅಧಿಕಾರಿ ಕುಸುಮಾ, ದಯಾನಂದ್, ಪಶು ಇಲಾಕೆ ಅಧಿಕಾರಿ ರೇವಣ್ಣ, ಇತರ ಅಧಿಕಾರಿ ವರ್ಗದವರು ಇದ್ದರು.

About The Author

Namma Challakere Local News
error: Content is protected !!