ಚಳ್ಳಕೆರೆ : ರಾಜ್ಯದಲ್ಲಿ 2023ರ ವಿಧಾನ ಸಭಾ ಚುನಾವಣೆ ಅಂಗವಾಗಿ ನೀತಿ ಸಂಹಿತೆ ಜಾರಿಯಿರುವುದರಿಂದ ಈ ಭಾರಿ ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅತೀ ಸರಳವಾಗಿ ರಾಜಾಕೀಯ ಮುಖಂಡರು ಶುಭಾಷಯ ಕೋರಿದ್ದಾರೆ.
ಅದರಂತೆ ಹಾಲಿ ಶಾಸಕ ಟಿ.ರಘುಮೂರ್ತಿ ರವರು ತಮ್ಮ ಅಪಾರ ಬೆಂಬಲಿಗರು ಕಾರ್ಯಕರ್ತರೊಡನೆ ನಗರದ ಕಾಂಗ್ರೆಸ್ ಕಛೇರಿಯಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಕಾಲ್ನಡಿಗೆಯಲ್ಲಿ ನೆಹರು ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆಯಲ್ಲಿ ಬಂದು ಅಂಬೇಡ್ಕರ್ ಪುತ್ಥಳಿಗೆ ಹೂವು ಮಾಲೆ ಹಾಕಿ ಸರಳವಾಗಿ ಅಂಬೇಡ್ಕರ್ ಜಂತಿಯ ಶುಭಾಷಯ ಕೋರಿದರು.
ಇನ್ನು ಮಾಧ್ಯದೊಂದಿಗೆ ಮಾತನಾಡಿದರು ಅವರು ಬಾಬಾ ಸಾಹೇಬ್‌ರ ಹಾದಿಯಲ್ಲಿ ನಡೆಯದಿದ್ದರು ಅವರ ಹಾಕಿಕೊಟ್ಟ ಮಾರ್ಗಗಳ ಸಂವಿಧಾನದ ಹಕ್ಕುಗಳನ್ನು ಪಡೆಯುವ ಮೂಲಕ ಅವರ ನಿಲುವಿಗೆ ಬದ್ದರಾಗಬೇಕು, ಅಂಬೇಡ್ಕರ್ ಕಾಲವಾದ ದಿನಗಳಲ್ಲಿ ಪ್ರಪಂಚದ 193ದೇಶಗಳು ಮರುಗಿದ್ದವು ಅಂತಹ ಮಹಾನ್ ವ್ಯಕ್ತಿಗಳು ಬರೆದ ಕೊಟ್ಟ ಸಂವಿಧಾನ ನಾವು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.
ಇದೇ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ಪರುಶುರಾಂಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಶಿಧರ್, ನಗರಸಭೆ ಅಧ್ಯಕ್ಷೆ ಸುಮಕ್ಕ, ಸದಸ್ಯ ರಮೇಶ್ ಗೌಡ, ರಾಘವೇಂದ್ರ, ಮಲ್ಲಿಕಾರ್ಜುನಾ, ಪ್ರಕಾಶ್, ಚಳ್ಳಕೆರೆಪ್ಪ, ಕವಿತಾ, ಸುಮಕ್ಕ, ಜಯಲಕ್ಷಿö್ಮ, ಪ್ರಕಾಶ್‌ಮೂರ್ತಿ, ಆರ್.ಪ್ರಸನ್ನ ಕುಮಾರ್, ಪರೀದ್ ಖಾನ್, ಸೈಯದ್ ಸಾಬ್, ಅನ್ವರ್ ಸಾಬ್, ಕೃಷ್ಣಮೂರ್ತಿ, ಸೂರಿ, ವಿರುಪಾಕ್ಷಪ್ಪ, ಹಳೆ ನಗರದ ಭದ್ರಿ, ಮಾರಣ್ಣ ಮುಜೀಬ್, ಉಷಾ, ಭಾಗ್ಯಮ್ಮ, ಸರಸ್ವತಿ, ಪರಸಪ್ಪ ಇತರರು ಇದ್ದರು.

About The Author

Namma Challakere Local News
error: Content is protected !!