ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ರಾಜಾಕೀಯ ದಿನದಿಂದ ದಿನಕ್ಕೆ ತನ್ನ ವರ್ಷಸ್ಸು ಪಡೆದುಕೊಳ್ಳುತ್ತಿದೆ ಅದರಂತೆ ಹಾಲಿ ಶಾಸಕ ಟಿ.ರಘುಮೂರ್ತಿಯವರು ಈಗಾಗಲೇ ಎರಡು ಬಾರಿ ತನ್ನ ಕ್ಷೇತ್ರದ ಹಿಡಿತವನ್ನು ಹಿಟ್ಟುಕೊಂಟಿರುವ ಅನುಭವವಿದೆ.
ಇಂತಹ ಕೈ ಪಡೆಯ ಶಾಸಕರನ್ನು ಕಟ್ಟಿಹಾಕಲು ಇನ್ನಿಲ್ಲದ ಕಸರತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ರವೀಶ್ಕುಮಾರ್ ಕಳೆದ 2018ರಿಂದ ಇಲ್ಲಿಯ ತನಕ ಮಾಡಿಕೊಂಡು ಬರುತ್ತಿದ್ದಾರೆ ಆದರೆ ಆದ್ಯಾವುದಕ್ಕೂ ಲೆಕ್ಕಿವಿಲ್ಲದಂತೆ ಎದುರಾಳಿಗಳೆ ಇಲ್ಲವಂತೆ ಮತದಾರರ ಓಲೈಕೆಯಲ್ಲಿ ಮುಂದಿದ್ದಾರೆ.
ಇನ್ನೂ ಆಯಿಲ್ ಸಿಟಿಯಲ್ಲಿ ನಿರೀಕ್ಷೆಯಿಟ್ಟುಕೊಂಡ ಬಿಜೆಪಿ ಟಿಕೆಟ್ ನಿಂದ ಕೈ ಅಭ್ಯರ್ಥಿಗಳಿಗೂ ಹಾಗೂ ಜೆಡಿಎಸ್ ಅಭ್ಯರ್ಥಿಗೂ ನಡುಕ ಉಂಟಾಗಬೇಕಿತ್ತು, ಆದರೆ ಅದ್ಯಾಕೋ ಆ ಲಕ್ಷಣಗಳು ಒಂದು ಗೋಚರಿಸುತ್ತಿಲ್ಲ ಮತ್ತೋಂಮ್ಮ ನಾನೇ ಕ್ಷೇತ್ರದ ಶಾಸಕ ಎಂದು ಹಾಲಿ ಶಾಸಕರು ಬೀಗುತ್ತಿದ್ದಾರೆ. ಬಿಜೆಪಿ ಟಿಕೆಟ್ ನಂತರ ಚಳ್ಳಕೆರೆ ಚಿತ್ರಣ ಬದಲಾಗುತ್ತೆ ಎಂಬ ಮಾತುಗಳು ಭರ್ಜರಿಯಾಗಿ ಕೇಳಿಬರುತ್ತಿದ್ದವು ಆದರೆ ಬಿಜೆಪಿ ವರಿಷ್ಠರು ಅಭ್ಯರ್ಥಿ ಆರ್.ಅನಿಲ್ ಕುಮಾರ್ ಹೆಸರನ್ನು ಕೊನೆಗೆ ಅಂತಿಮಗೊಳಿಸಿ ಕಣಕ್ಕಿಳಿಸಿದ್ದಾರೆ.
ಇನ್ನೂ ಆಯಿಲ್ ಸಿಟಿಯ ಕದನಲ್ಲಿ ಒಟ್ಟಾರೆ ನಾಲ್ಕು ಜನ ಉರಿಯಾಳುಗಳು ಕಣದಲ್ಲಿ ಇರವುದು ಗೋಚರಿಸುತ್ತದೆ ಇನ್ನು ಕಾಂಗ್ರೇಸ್ ನಿಂದ ಹಾಲಿ ಶಾಸಕ ಟಿ.ರಘುಮೂರ್ತಿ, ಜೆಡಿಎಸ್ ನಿಂದ ಎಂ.ರವೀಶ್ ಕುಮಾರ್, ಇನ್ನೂ ಬಹು ನೀರೀಕ್ಷೆಯ ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್, ಇನ್ನೂ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಟಿ.ಕುಮಾರಸ್ವಾಮಿ ಪ್ರಸ್ತುತ ರಾಜಾಕೀಯ ಕದನಲ್ಲಿ ಕಾದಾಡುವುದು ಕಾಣಬಹದು
ಈಗಾಗಲೇ ಕಳೆದ 2013 ರಿಂದ 2018 ಎರಡು ಬಾರಿ ಅಧಿಕಾರದ ಗದ್ದುಗೆ ಹಿಡಿದ ಶಾಸಕ ಟಿ.ರಘುಮೂರ್ತಿ ಮತ್ತೆ 2023ರ ಅಧಿಕಾರದ ಗದ್ದುಗೆಯ ಏರÀಲು ಸಿದ್ದಾರಾಗಿದ್ದಾರೆ. ಒಟ್ಟಾರೆ ಆಯಿಲ್ ಸಿಟಿಯ ಇಹಾಸದ ದಾಖಲೆ ಪುಟಗಳಲ್ಲಿ ದಾಖಲು ಬರೆಯಲು ಹೊರಟಿದ್ದಾರೆ ಹಾಲಿ ಶಾಸಕರು ಎನ್ನಲಾಗಿದೆ.
ಇನ್ನೂ ಕ್ಷೇತ್ರದ ಪ್ರತಿಯೊಂದು ಮತದಾರರು ಕೂಡ ಈ ಭಾರಿ ಕಾಂಗ್ರೇಸ್ನತ್ತ ಒಲವು ತೋರುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.
ಪಕ್ಷೇತರ ಅಭ್ಯರ್ಥಿ ತನ್ನದೇ ಆದ ವಚರ್ಸ್ಸಸಿನ ಜೊತೆಗೆ ತಂದೆ ಮಾಜಿ ಸಚಿವರ ಅನುಕಂಪ ಇವರ ಮೇಲೆ ಇಟ್ಟರೆ ಕದನ ರಂಣರAಗವಾಗುತ್ತದೆ ಇನ್ನೂ ಹಾಲಿ ಶಾಸಕರು ಕಳೆದ ಹತ್ತು ವರ್ಷಗಳ ಅಭಿವೃದ್ದಿಯನ್ನು ಮತದಾರರ ಮುಂದೆ ಇಟ್ಟು ಮತ ಕೇಳುವುದು ವಾಡಿಕೆಯಾಗಿದೆ, ಕಳೆದ ಬಾರಿ ಎರಡನೇ ಹಂತಕ್ಕೆ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ನಾನು ಕಳೆದ ಬಾರಿ ಸೋತಿದ್ದೆನೆ, ನಿಮ್ಮ ಸೇವೆ ಮಾಡಲು ನನಗೆ ಒಂದು ಬಾರಿ ಅವಕಾಶ ಮಾಡಿಕೊಡಿ ಎಂದು ಮತದಾರ ಓಲೈಕೆಯಲ್ಲಿದ್ದಾನೆ, ಇನ್ನೂ ಬಹು ನಿರೀಕ್ಷೆಯ ಕುದುರೆಯ ಮೇಲೆ ಬಂದ ಕೇವಲ 28 ದಿನ ಚುನಾವಣೆಗೆ ಬಾಕಿ ಇರುವ ಸಂಧರ್ಭದಲ್ಲಿ ಕಣಕ್ಕಿಳಿದ ಬಿಜೆಪಿ ಅಭ್ಯರ್ಥಿ ಆರ್.ಅನಿಲ್ಕುಮಾರ್ ಮತದಾರರ ಬಳಿ ಯಾವ ಅಸ್ತç ಉಪಯೋಗಿಸುವರೋ ಕಾದು ನೋಡಬೇಕಿದೆ.
ಇನ್ನೂ ಕ್ಷೇತ್ರದಲ್ಲಿ ಮತದಾರ ಊಹಿಸಿದ ಪ್ರಕಾರ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ ಯಾವುದಾದರು ಪಕ್ಷದ ಬಾವುಟ ಹಿಡಿದು ಅಥವಾ ಪಕ್ಷೇತರವಾಗಿ ಕಣ್ಣಕ್ಕಿಳಿಯುತ್ತಾರೆಂಬುದು ಮಾತ್ರ ಕೂತುಹಲ ಆದರೆ ಅಂದುಕೊAಡ ಹಾಗೇ ಐದು ಜನ ಅಭ್ಯರ್ಥಿಗಳು ಕದನದಲ್ಲಿ ಕಣಕ್ಕಿಳಿದರೆ ಆಯಿಲ್ ಸಿಟಿಯಲ್ಲಿ ಮಾತ್ರ ರಾಜಾಕೀಯ ಚಿತ್ರಣವೇ ಬೆರೆಯಾಗುತ್ತದೆ ಎಂಬುದು ಮತದಾರನ ಮನದಾಳದ ಮಾತಾಗಿದೆ.
ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಮತದಾರರು
ಮಹಿಳಾ ಮತದಾರರು—109031
ಪುರುಷ ಮತದಾರರು—108384
ಇತರೆ–03
ಒಟ್ಟು ಮತದಾರರು—217418
ಆಯಿಲ್ ಸಿಟಿಯ ಹಿನ್ನೋಟ :
1999ರಲ್ಲಿ ಬಿಜೆಪಿಯಿಂದ ಬಸವರಾಜ್ ಮಂಡಿಮAಠ್-26517 ಗೆಲವು. ಸಮೀಪ ಸ್ಪರ್ಧಿ ತಿಪ್ಪೆಸ್ವಾಮಿ- 17665 ಸೋಲು.
2004ರಲ್ಲಿ ಕಾಂಗ್ರೇಸ್ನಿAದ ಡಿ.ಸುಧಾಕರ್-47550 ಗೆಲುವು, ಬಸವರಾಜ್ ಮಂಡಿಮAಠ್ ಬಿಜೆಪಿಯಿಂದ-20199 ಮತಗಳಿಂದ ಸೊಲು.
2008 ಬಿಜೆಪಿಯಿಂದ ತಿಪ್ಪೆಸ್ವಾಮಿ-42591ಗೆಲುವು
ಶಶಿಕುಮಾರ್-42302 ಮತಗಳಿಂದ ಸೋಲು.
2013 ಕಾಂಗ್ರೇಸ್ನಿAದ ಟಿ.ರಘುಮೂರ್ತಿ-60197ಮತಗಳು ಪಡೆದು ಗೆಲುವು,
ಕೆಜೆಪಿಯಿಂದ ಕೆಟಿ.ಕುಮಾರಸ್ವಾಮಿ-37074ಮತಗಳಿಂದ ಸೋಲು.
2018ರಲ್ಲಿಎರಡನೇ ಬಾರಿಗೆ ಶಾಸಕ ಟಿ.ರಘುಮೂರ್ತಿ-72874 ಮತಗಳಿಂದ ಗೆಲುವು.
ಜೆಡಿಎಸ್ನಿಂದ ಅಭ್ಯರ್ಥಿ ಎಂ.ರವೀಶ್ಕುಮಾರ್-59335 ಮತಗಳಿಂದ ಸೋಲುಂಡಿದ್ದರು.