ಚಳ್ಳಕೆರೆ : ಪ್ರಜಾಪ್ರಭುತ್ವ ಉಳಿವಿಗೆ ಪ್ರತಿಯೊಬ್ಬ ನಾಗರೀಕನ ಮತದಾನ ಮಾಡುವುದು ಕರ್ತವ್ಯ ಆದ್ದರಿಂದ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಬೇಕು ನಿಮ್ಮ ಮತ ನಿಮ್ಮ ಹಕ್ಕು, ಮತದಾನದದಿಂದ ವಂಚಿತರಾಗಬಾರದು ಎಂಬ ಸದ್ದುದ್ದೇಶದಿಂದ ಇಂದು ಚಳ್ಳಕೆರೆ ತಾಲೂಕಿನ ಸ್ವೀಪ್ ಸಮಿತಿಯ ತಾಲೂಕು ಅಧ್ಯಕ್ಷ ಜೆಕೆ.ಹೊನ್ನಯ್ಯ ಅಧ್ಯಕ್ಷತೆಯಲ್ಲಿ ನಗರಸಭೆ ಪೌರಾಯುಕ್ತ ರಾಮಕೃಷ್ಣ, ಹಾಗೂ ಪೌರಾಕಾರ್ಮಿಕ ಸಿಬ್ಬಂದಿಗಳು ಜಾಗೃತಿ ಮೂಡಿಸಲು ನಗರದ ಪ್ರಮುಖ ಬೀದಿಗಳಲ್ಲಿ ಜಾಥ ಮಾಡುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.
ಜಿಕೆ. ಹೊನ್ನಯ್ಯ ಮಾತನಾಡಿ, ನಮ್ಮ ದೇಶದ ಭದ್ರ ಬುನಾದಿಗೆ ಮತದಾನ ಮಾಡಬೇಕು ನಾವು ಮತದಾನದಿಂದ ಹಿಂದೆ ಸರಿದರೆ ನಮ್ಮ ದೇಶಕ್ಕೆ ಮಾರಕವಿದ್ದಂತೆ ಆದ್ದರಿಂದ ನಾವು ನತಪ್ಪದೆ ಮತದಾನ ಮಾಡಬೇಕು, ಅತೀ ಕಡಿಮೆ ಮತದಾನ ಮಾಡುವುದು ನಗರ ಪ್ರದೇಶಗಳಲ್ಲಿ ಹೆಚ್ಚಿನದಾಗಿದೆ ಆದ್ದರಿಂದ ಪ್ರಬುಧ್ದ ಮನಸ್ಥೀತಿ ಇದ್ದರು ಕೂಡ ಇಲ್ಲಿ ಮತದಾನ ಶೇಖಡ ಕುಂಠಿತಗೊಳ್ಳುವುದು ವಿಪರ್ಯಾಸವೇ ಸರಿ. ಆದ್ದರಿಂದ 2023ರ ಚುಣಾವಣೆಯಲ್ಲಿ ಎಲ್ಲಾರು ನೂರಕ್ಕೆ ನೂರರಷ್ಟು ಮತದಾನ ಮಾಡಬೇಕು ಎಂದರು.
ಇದೇ ಸಂಧರ್ಭದಲ್ಲಿ ಪೌರಾಯುಕ್ತ ರಾಮಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಅದೀಕ್ಷರಾದ ದಯಾನಂದ, ನಗರಸಭೆ ಮ್ಯಾನೇಜರ್ ಲಿಂಗರಾಜ್, ತಾಪಂ.ದಿವಾಕರ್, ಶ್ರೀಧರ್ ಇತರರು ಇದ್ದರು.