ಚಳ್ಳಕೆರೆ : ಬಯಲು ಸೀಮೆಯಲ್ಲಿ ಗೋವುಗಳ ಆರಾಧಕರೇ ಹೆಚ್ಚು ಇಂತಹ ಒಂದು ಪದ್ದತಿಯನ್ನು ಸಂಪ್ರದಾಯವನ್ನು ನಾವು ಮಧ್ಯ ಕರ್ನಾಟಕ ಭಾಗದ ಆಂದ್ರದ ಗಡಿಯನ್ನು ಅಂಚಿಕೊAಡ ಚಳ್ಳಕೆರೆ ತಾಲೂಕಿನಲ್ಲಿ ಕಾಣಬಹುದು
ಹೌದು ನಿಜಕ್ಕೂ ಇಂತಹದೊAದು ಸಂಪ್ರಾದಯಗಳು ಹಾಸುಹೊಕ್ಕಾಗಿರುವುದು ಇಲ್ಲಿನ ವಿಶೇಷ ತಾಲೂಕಿನಲ್ಲಿ ಗೋವುಗಳು ಇನ್ನೂ ಉಳಿದಿರುವುದು ಇಲ್ಲಿನ ಸಂತತಿಯೇ ಮೂಲ ಕಾರಣವಾಗಿದೆ. ಅದರಂತೆ ಆ ಗೋವುಗಳ ಸಂರಕ್ಷಣೆಗೆ ಅವುಗಳ ಮೇವಿಗೆ ಯಾರೋಬ್ಬರೂ ಕೂಡ ಮುಂದೆ ಬಾರದೆ ಇದ್ದ ಸಂಧರ್ಭದಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ ಸುಧಾಮೂರ್ತಿರವರು ಮೂರ್ತಿ ಫೌಂಡೇಷನ್ ಪ್ರಾಯೋಜಕತ್ವದಲ್ಲಿ ಉಚಿತ ಮೇವು ವಿತರಣಾ ಕೇಂದ್ರಗಳು ತೆರೆದಿರುವುದು ಬಾಯರಿದ ಜೀವನಕ್ಕೆ ಮರು ಜನ್ಮ ನೀಡಿದತಾಂಗಿದೆ.
ಎAದಿನAತೆ ಕಳೆದ ಮೂರು ವಾರಗಳಿಂದ ನಿರಂತರವಾಗಿ ಮೇವು ವಿತರಣಾ ಕೇಂದ್ರಗಳನ್ನು ಚಳ್ಳಕೆರೆ ಭಾಗದ ಸರಿಸುಮಾರು 22 ಬುಡಕಟ್ಟು ಜನಾಂಗದವರು ತಲತಲಾಂತರದಿAದ ನಡೆಸಿಕೊಂಡು ಬರುತ್ತಿರುವ ದೇವರ ಎತ್ತುಗಳ ಹಟ್ಟಿಗಳಿಗೆ ಬೇಸಿಗೆ ಕಾಲದಲ್ಲಿ ಮೇವನ್ನು ಒದಗಿಸುವ ಕಾರ್ಯಕ್ರಮ ಕಳೆದ ಐದು ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬರುತ್ತಿದೆ. ಇಂದು ಅಜ್ಜಯ್ಯನಗುಡಿ, ಮುತ್ತಿಗೇನಹಳ್ಳಿ, ಸೂರಮ್ಮನಹಳ್ಳಿ ಪ್ರಾಂತ್ಯಗಳಲ್ಲಿನ ಸರಿಸುಮಾರು 1000 ಹಸುಗಳಿಗೂ, ಜೊತೆಜೊತೆಯಲ್ಲಿ ಪುಟ್ಟ ಪುಟ್ಟ ಕರುಗಳಿಗೂ ಸಹ (40ಕರುಗಳು) ಪೌಷ್ಟಿಕಾಂಶದ ಆಹಾರವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮ ನಿರಂತರವಾಗಿ ಮುಂಗಾರು ಮಳೆ ಆರಂಭವಾಗುವವರೆಗೆ ನಡೆಯುತ್ತದೆ ಎಂದು ಯೋಜನೆಯ ರೂವಾರಿ ಪೂಜ್ಯ ಸ್ವಾಮಿ ಜಪಾನಂದಜೀ ಸ್ವಾಮೀಜೀಯರವರು ಹೇಳಿದ್ದಾರೆ.
ಅವರು ಚಳ್ಳಕೆರೆಯ ಅಜ್ಜಯ್ಯನಗುಡಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಿಲಾರಿಗಳು ಪೂಜ್ಯ ಸ್ವಾಮೀಜಿಯವರಿಗೆ ಇಷ್ಟು ದಿವಸಗಳ ತನಕ ಸರಿಯಾದ ಆಹಾರ, ಮೇವಿನ ಕೊರತೆಯಿಂದ ಪುಟ್ಟ ಪುಟ್ಟ ಕಂದಮ್ಮಗಳಿಗೂ ಹಾಲುಣಿಸದ ಸ್ಥಿತಿಯಲ್ಲಿ ಗೋಮಾತೆ ಚಡಪಡಿಸುತ್ತಿರುವ ಸಂಕಷ್ಟಕರವಾದ ಸನ್ನಿವೇಶ ಉಂಟಾಗಿತ್ತು. ಆದರೆ ಇತ್ತೀಚೆಗೆ ಸುಧಾಮೂರ್ತಿ ರವರ ಮೂರ್ತಿ ಫೌಂಡೇಷನ್ ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡ ಇವರಿಂದ ಯೋಜನೆಗಳು ಆರಂಭವಾದ ನಂತರ ಈ ಗೋಮಾತೆಗಳು ತಮ್ಮ ತಮ್ಮ ಕಂದಮ್ಮಗಳಿಗೆ ಹಾಲುಣಿಸುತ್ತಿರುವ ದೃಶ್ಯ ನಿಜಕ್ಕೂ ಮನಕರಗುವಂತಿದೆ,
ಒಂದೆಡೆ ಭಯಂಕರ ಬಿಸಿಲಿನ ತಾಪ, ಮತ್ತೊಂದೆಡೆ ಕಾಡು ಮೇಡುಗಳಿಗೆ ಬೆಂಕಿ ಹಚ್ಚಿ ಇರುವ ಹಸಿರನ್ನೇ ಸುಟ್ಟು ಬೂದಿ ಮಾಡುವ ತಾಪ, ಮತ್ತೆಲ್ಲದಕ್ಕಿಂತ ಮಿಗಿಲಾಗಿ ಚುನಾವಣೆಯ ತಾಪ. ಈ ಮೂರು ತಾಪಗಳಿಂದ ಜರ್ಝರಿತರಾದ ರೈತಾಪಿ ಜನರು, ಗೋಪಾಲಕರ ಸಂಕಷ್ಟವನ್ನು ದೂರ ಮಾಡಲು ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಮೂರ್ತಿ ಫೌಂಡೇಷನ್ ಕಟಿಬದ್ದವಾಗಿರುವುದು ಅತ್ಯಂತ ಶ್ಲಾಘನೀಯವಾದ ವಿಚಾರವೇ ಸರಿ.
ಒಂದೆಡೆ ಗೋಮಾತೆಯನ್ನು ಸಂರಕ್ಷಿಸಬೇಕೆAದು ವೇದಿಕೆಗಳ ಮೇಲೆ ಪುಂಖಾನುಪುAಖವಾಗಿ ಭಾಷಣಗಳನ್ನು ಬೀರುತ್ತಿರುವ ಬಾಷಣಕಾರು, ಮತ್ತೊಂದೆಡೆ ಸದ್ದುಗದ್ದಲವಿಲ್ಲದೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಗೋವುಗಳನ್ನು ಹಾಗೂ ಜಾನುವಾರುಗಳನ್ನು ರಕ್ಷಿಸುತ್ತಿರುವ ಪೂಜ್ಯ ಸ್ವಾಮಿ ಜಪಾನಂದಜೀ ಹಾಗೂ ಮೂರ್ತಿ ಫೌಂಡೇಷನ್ ರವರ ಕಾರ್ಯ ನಿಜಕ್ಕೂ ಗಮನಿಸಬೇಕಾದ ಅಂಶವೇ ಸರಿ.
ಪೂಜ್ಯ ಸ್ವಾಮಿ ಜಪಾನಂದಜೀ ರವರ ಪ್ರಕಾರ ಇನ್ನೂ ಎರಡು ತಿಂಗಳು ಈ ಸೇವೆ ಮುಂದುವರೆಯುತ್ತದೆ ಎಂದು ತಿಳಿಸಿದರು.
1986ರಿಂದ ಈ ಗೋಮಾತೆಯ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸ್ವಾಮಿ ಜಪಾನಂದಜೀ ರವರ ಅನುಭವ ನಿಜಕ್ಕೂ ಅಪಾರವಾದದ್ದು. ಈ ಗೋಮಾತೆ ಸೇವೆಗೆ ಸಹಕಾರ ನೀಡುತ್ತಿರುವ ಸುಧಾಮೂರ್ತಿ, ಅಧ್ಯಕ್ಷರು, ಮೆ|| ಮೂರ್ತಿ ಫೌಂಡೇಷನ್ ಹಾಗೂ ಇನ್ಫೋಸಿಸ್ ಫೌಂಡೇಷನ್ ರವರನ್ನು ಚಳ್ಳಕೆರೆ, ಮೊಳಕಾಲ್ಮೂರು, ಪಾವಗಡ ಪ್ರದೇಶದ ರೈತಾಪಿ ಜನರು ಹಾಗೂ ಗೋಪಾಲಕರು ಸ್ಮರಿಸಿದಂತಾಗಿಸಿದೆ.
ನಿರ್ಗತಿಕರಿಗೆ ಪರಿಹಾರ ಯೋಜನೆ : ಮೊಳಕಾಲ್ಮೂರು ತಾಲ್ಲೂಕಿನ ಚೋಳಕೆರೆ ಕುಗ್ರಾಮದಲ್ಲಿ ದೂರದ ಮಹಾರಾಷ್ಟ್ರದ ಶಿರಡಿ ಪ್ರದೇಶದಿಂದ ಇದ್ದಿಲು ತಯಾರಿಸಲು ಬಂದAತಹ ಅಲೆಮಾರಿ ಜನರ ಪರಿಸ್ಥಿತಿಯನ್ನು ಕಂಡ ತಕ್ಷಣ ಹತ್ತು (10) ಕುಟುಂಬಗಳಿಗೆ ರೂ.2,000/- ಬೆಲೆಯ ದವಸಧಾನ್ಯಗಳ ಚೀಲಗಳನ್ನು ವಿತರಿಸಲಾಯಿತು.