ಚಳ್ಳಕೆರೆ : ಒಂದಲ್ಲ ಒಂದು ರೀತಿಯಲ್ಲಿ ಈಡೀ ರಾಜ್ಯದಲ್ಲಿ ಸದ್ದು ಮಾಡುವ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಮಾತ್ರ 2023ರಕ್ಕೆ ರಣ ರಂಗವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಅದರಂತೆ ಕಳೆದ 2018ರ ಚುನಾವಣೆಯಲ್ಲಿ ರಾಜ್ಯದ ಸಚಿವರಾದ ಬಿ.ಶ್ರೀರಾಮುಲು ಮೊಳಕಾಲ್ಮುರು ಕ್ಷೇತ್ರದಲ್ಲಿ ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿಗೆ ಟಿಕೆಟ್ ತಪ್ಪಿಸಿ ಅವರೆ ಸ್ಪರ್ಧಿಸಿದ ಸಂಧರ್ಭದಲ್ಲಿ ಇದೇ ರೀತಿಯಲ್ಲಿ ಬಂಡಾಯ ಎದ್ದು ಕಾರುಗಳ ಮೇಲೆ ಕಲ್ಲು ತೂರಿ ಈಡೀ ರಾಜ್ಯವೇ ತಿರುಗಿ ನೊಡುವಂತ ಕ್ಷಣಗಳು ಹಾಗಿದ್ದವು
ಆದೇ ರೀತಿಯಲ್ಲಿ 2023ಕ್ಕೆ ಕಾಂಗ್ರೇಸ್ ನಿಂದ ಡಾ.ಬಿ.ಯೋಗೇಶ್ ಬಾಬುಗೆ ಕಾಂಗ್ರೇಸ್ ಪಕ್ಷದ ವರಿಷ್ಠರು ಟಿಕೆಟ್ ನೀಡುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣರವರಿಗೆ ಟಿಕೆಟ್ ನೀಡಿದ್ದರಿಂದ ಕಳೆದ ಹಲವು ದಿನಗಳಿಂದ ಬಿಡುವಿಲ್ಲದೆ ಬಂಡಾಯ ಎದ್ದ ಡಾ.ಬಿ.ಯೋಗೇಶ್ ಬಾಬು ಕಾರ್ಯಕರ್ತರೊಡನೆ ಸಭೆ ಮೇಲೆ ಸಭೆ ಮಾಡಿ ಅಂತಿಮ ತಿರ್ಮಾನ ಕೈ ಗೊಳ್ಳಲು ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದಾರೆ.
ಒಟ್ಟಾರೆ ಮೊಳಕಾಲ್ಮುರು ಕ್ಷೇತ್ರದ ವಿಧಾನಸಭಾ ಚುನಾವಣೆ ಎಂದರೆ ಬಂಡಾಯದ ಕ್ಷೇತ್ರವಾಗಿ ಪರಿಣಮಿಸುತ್ತಿದೆ.

ಈಗೇ ಕಾಂಗ್ರೇಸ್ ಟಿಕೆಟ್ ಕೈ ತಪ್ಪಿದ ಮೊಳಕಾಲ್ಮೂರು ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಡಾ.ಬಿ.ಯೋಗೇಶ್ ಬಾಬು ಬಂಡಾಯ ಕಾಂಗ್ರೇಸ್ ಎದ್ದೆಳಲು ಅಥವಾ ಬೇರೆ ಪಕ್ಷದ ಬಾವುಟ ಹಿಡಿಯಲು ಮತದಾರರ ಹಾಗೂ ಕಾರ್ಯಕರ್ತರ, ಮುಖಂಡರ ಹತ್ತಿರ ಚರ್ಚೆ ಮಾಡಲು ಈಡೀ ಕ್ಷೇತ್ರದಲ್ಲಿ ಸುಮಾರು 30 ವಾಹನಗಳಲ್ಲಿ ನೂರಾರು ಕಾರ್ಯಕರ್ತರೊಡನೆ ಕ್ಷೇತ್ರ ಪ್ರದಕ್ಷಿಣೆ ಹಾಕುತ್ತಿದ್ದಾರೆ.
ಒಟ್ಟಾರೆ 2023ರ ವಿಧಾನಸಭಾ ಚುನಾವಣೆಗೆ ಈ ಬಾರಿ ಈಡೀ ರಾಜ್ಯವೇ ತಿರುಗಿ ನೋಡುವಂತAಹ ಕ್ಷಣಗಳು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಣಸಿಗುತ್ತಿವೆ.

Namma Challakere Local News
error: Content is protected !!