ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ ರವರು ಈಡೀ ಕ್ಷೇತ್ರದಲ್ಲಿ ಭರ್ಜರಿ ರೌಂಡ್ಸ್ ಒಡೆಯುವುದರ ಮೂಲಕ ತಿರುಗಾಟ ನಡೆಸುತ್ತಿದ್ದಾರೆ.
ಅದರಂತೆ ಇಂದು ಕ್ಷೇತ್ರದ ತುರವನೂರು ಹೋಬಳಿಯ ಬೊಮ್ಮಕ್ಕನಹಳ್ಳಿ ಗ್ರಾಮದ ಜೆಡಿಎಸ್ ಪಕ್ಷದ ಹಲವು ಮುಖಂಡರನ್ನು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ಇನ್ನೂ ಅದರಂತೆ ಚಳ್ಳಕೆರೆ ನಗರದ ಕಾಂಗ್ರೇಸ್ ಕಛೇರಿಯಲ್ಲಿ ನಡೆದ 166ನೇ ಬಾಬು ಜಗಜೀವನ್ ರಾಮ್ ರವರ ಜಯಂತಿಯಲ್ಲಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿ ಶುಭಾಷಯ ಕೋರಿದ್ದಾರೆ,
ನಂತರ ತಾಲೂಕಿನ ಚಿಕ್ಕಚೆಲ್ಲೂರು, ಓಬನಹಳ್ಳಿ ಭೋವಿಕಾಲೋನಿ, ಪಿ. ಓಬನಹಳ್ಳಿ, ಈಗೇ ಹಲವು ಗ್ರಾಮದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಚರ್ಚಿಸಿದ್ದಾರೆ ಒಟ್ಟಾರೆ ಚುನಾವಣೆ ಪೂರ್ವ ಭರ್ಜರಿಯಾಗಿ ತಿರುಗಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ,