ಚಳ್ಳಕೆರೆ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿ ಇರುವ ಕಾರಣ ಡಾ.ಬಾಬು ಜಗಜೀವನ್ ರಾಮ್ ರವರ 116ನೇ ಜಯಂತಿಯನ್ನು ಕೇವಲ ಅಧಿಕಾರಗಳು ಸೇರಿ ಸರಳವಾಗಿ ಬಾಬು ಜಗಜೀವನ ಪ್ರತಿಮೆಗೆ ಹೂವು ಮಾಲೆ ಅರ್ಪಿಸಿ ಜಯಂತಿ ಶುಭಾಷಯಗಳನ್ನು ತಿಳಿಸಿದರು.
ಇನ್ನೂ ತಾಲೂಕು ಕಛೇರಿಯಲ್ಲಿ ಬಾಬು ಜಗಜೀವನ ರಾಮ್ ರವರ ಭಾವ ಚಿತ್ರ ಇಟ್ಟು ಪುಷ್ಪ ನಮನ ಸಲ್ಲಿಸಿದರು ಈದೇ ಸಂಧರ್ಭದಲ್ಲಿ ಚುನಾವಣೆ ಅಧಿಕಾರಿ ಬಿ.ಆನಂದ್, ಸಹಾಯಕ ಚುನಾವಣೆ ಅಧಿಕಾರಿ ತಹಶೀಲ್ದಾರ್ ರೇಹಾನ್ ಪಾಷ, ನೋಡೆಲ್ ಅಧಿಕಾರಿ ಹಾಗೂ ಇಓ ತಾಪಂ ಹೊನ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಪೌರಾಯುಕ್ತ ರಾಮಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇರ್ಶಕ ಮಂಜುನಾಥ್, ಅಧೀಕ್ಷರಾದ ದಯಾನಂದ್, ಕೃಷಿ ಅಧಿಕಾರಿ ಅಶೋಕ್, ಹಾಸ್ಟೆಲ್ ಸಿಬ್ಬಂದಿ ಇತರ ಅಧಿಕಾರಿವರ್ಗದವರು ಪಾಲ್ಗೋಡಿದ್ದರು.