ಚಳ್ಳಕೆರೆ : ವಿಕಲ ಚೇತನರಿಗೆ ವಿಶೇಷವಾಗಿ ಮತಗಟ್ಟೆ ಬಳಿ ಬಂದು ಮತ ಚಲಾಯಿಸಲು ಸೂಕ್ತವಾದ ವ್ಯವಸ್ಥೆ ಕಲ್ಪಿಸಿದೆ ಇನ್ನೂ ಬೆಟ್ ರೆಷ್ಟ್ ಇರವವರಿಗೆ ಮನೆಯಲ್ಲಿ ಮತಚಲಾಯಿಸಲು ಅವಕಾಶ ಕಲ್ಪಿಸಿದೆ ಒಟ್ಟಾರೆ ನೂರಕ್ಕೆ ನೂರರಷ್ಟು ಮತದಾನ ಮಾಡಬೇಕು ಎಂದು ಚುನಾವಣೆ ಅಧಿಕಾರಿ ಬಿ.ಆನಂದ್ ಹೇಳಿದರು.
ಅವರು ನಗರದ ತಾಲೂಕು ಪಂಚಾಯತ್ ಆವರಣದಲ್ಲಿರುವ ವಿಕಲಚೇತನ ಕಚೇರಿ ಆವರಣದಲ್ಲಿ ವಿಕಲಚೇತನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು, ಕ್ಷೇತ್ರದಲ್ಲಿ ಇರುವ ಸುಮಾರು 6ಸಾವಿರ ವಿಕಲ ಚೇತನರು ಮತದಾನ ಮಾಡಬೇಕು ಯಾರೂ ಕೂಡ ಮತದಾನದಿಂದ ವಂಚಿತರಾಗಬಾರದು ಚುನಾವಣೆ ಆಯೋಗ ಪ್ರಪ್ರಥಮ ಬಾರಿಗೆ ವಿಕಲ ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಮನೆಯಲಿದ್ದೇ ಅಂಚೆ ಮತದಾನ ಮಾಡುವ ಅವಕಾಶ ನೀಡಿದ್ದು ಈಗಾಗಲೆ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾನದ ಬಗ್ಗೆ ಒಪ್ಪಿಗೆ ಪತ್ರ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ವಿಕಲಚೇತನ ತಾಲೂಕು ನೋಡಲ್ ಅಧಿಕಾರಿ ನರಸಿಂಹಮೂರ್ತಿ ಮಾತನಾಡಿ, ಮತದಾನ ನಮ್ಮ ಹಕ್ಕು ನಾವು ನಮ್ಮ ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಮತಗಟ್ಟೆಗೆ ಬಂದು ಮತ ಚಲಾಯಿಸುತ್ತೆವೆ ವಯಸ್ಸಾದವರಿಗೆ ಮಾತ್ರ ಮನೆಯಲ್ಲಿ ಅವಕಾಶ ನೀಡಿ, ವಿಕಲಚೇತನರಿಗೆ ವಾಹನ ಸೌಲಭ್ಯ ಒದಗಿಸಿದರೆ ಸಾಕು ಮತಗಟ್ಟೆ ಬಂದು ಮತದಾನ ಮಾಡಲಾಗುತ್ತದೆ ಎಂದರು.

ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ ಮತದಾನ ಎಂಬುದು ನಿಮ್ಮ ಹಕ್ಕು ಇದನ್ನು ಬಹಳ ಸಂಭ್ರಮದಿAದ ಮತ ನೀಡುವ ಮೂಲಕ ನಿಮ್ಮ ಹಕ್ಕು ಚಲಾಯಿಸಬೇಕು, ಸಮಾಜದಲ್ಲಿ ವಿಭಿನ್ನವಾಗಿ ವಿಶೇಷವಾಗಿ ನಿಮ್ಮ ಮತದಾನ ದಿಕ್ಸೂಚಿಯಾಗಬೇಕು ಒಟ್ಟಾರೆ ಮತದಾನ ನಮ್ಮ ಹಕ್ಕು ಎಂಬುದು ಮರೆಯಬಾರದರು ಎಂದರು.

Namma Challakere Local News
error: Content is protected !!