ಚಳ್ಳಕೆರೆ : ಇಂದಿನಿAದ ಕ್ಷೇತ್ರದಲ್ಲಿ ಯಾವುದೇ ಸಾಮಾಜಿಕ ನಾಟಕ, ಜನ ಸೇರುವ ಸಭೆ ಸಮಾರಂಭಗಳಿಗೆ ನಿಷೇಧ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿ ಬಿ.ಆನಂದ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಎಫ್‌ಎಸ್‌ಟಿ-ವಿಎಸ್ ಟಿ. ಪ್ಲೇಯಿಂಗ್ ಸ್ಕಾö್ಯಡ್ ಹಾಗೂ ಪಿಡಿಒಗಳಿಗೆ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಚುನಾವಣೆ ಎಂದರೆ ನಮ್ಮ ನಿಮ್ಮ ಮನೆಯ ಕೆಲಸ ಅಲ್ಲ ಯಾವುದೇ ಕಾರಣಕ್ಕೆ ಸಬೂಬು ಹೇಳದೆ ನಿಮ್ಮ ವ್ಯಾಪ್ತಿಯ ಕಾರ್ಯವನ್ನು ಚಾಚು ತಪ್ಪದೆ ಪೂರೈಸಬೇಕು.
ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ ಆದರೆ ರಾಜಾಕೀಯ ಪಕ್ಷಗಳು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದು ವಾಹನಗಳ ಬಳಕೆ ಮಾಡುವುದು ಈಗೇ ಯಾವುದೇ ಅಚಾರ್ತು ಜರುಗಿದರು ಕೂಡಲೇ ಪ್ರಕರಣ ದಾಖಲಿಸಿ ನಂತರ ದೂರವಾಣಿ ಮೂಲಕ ಸಂಪರ್ಕಿಸಿ ನಿಮ್ಮ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ಎಂದರು.
ನಿಮ್ಮ ಗ್ರಾಮದಲ್ಲಿ ನಿಮ್ಮ ವಾರ್ಡಗಳಲ್ಲಿ ರಾಜಾಕೀಯ ಹೇಳಿಕೆಗಳು ಹಾಗೂ ಬ್ಯಾನರ್‌ಗಳು ಕಂಡು ಬಂದರೆ ನೀವೆ ಹೊಣೆ ಆದ್ದರಿಂದ ಪಕ್ಷದ ಪ್ರೇರಿತ ಬರವಣೆಗಳು ಈಗೇ ರಾಜಾಕೀಯ ಚಟುವಟಿಕೆಗಳ ಬಗ್ಗೆ ಯಾವುದೇ ಇದ್ದರು ತೆಗೆಸಿ ಎಂದು ಪಿಡಿಓಗೆ ಸೂಚಿಸಿದರು.
ಚುನಾವಣೆ ಪ್ರಚಾರಕ್ಕೆ ಅಡ್ಡಿಯಿಲ್ಲ ಆದರೆ ಪ್ರಚಾರ ಮುನ್ನ ಪರವಾನಿಗೆ ಪಡೆಯಬೇಕು ಅದು ಅಭ್ಯರ್ಥಿ ಹೆಸರಲ್ಲಿ ಪ್ರಚಾರ ಮಾಡುವಂತಿಲ್ಲ, ನಂತರ ಮಾಡಿಕೊಳ್ಳಲಿ ಎಂದು ಹೇಳಿದರು.
ಗ್ರಾಮದಲ್ಲಿ ಧಾರ್ಮಿಕವಾಗಿ ದೇವಸ್ಥಾನಕ್ಕೆ ಓಗುವುದಕ್ಕೆ ಅಡ್ಡಿಯಿಲ್ಲ ಆದರೆ ಚುನಾವಣೆ ಪ್ರಚಾರ ಮಾಡುವಂತಿಲ್ಲ ಪಕ್ಷದ ಪರವಾಗಿ ಪ್ರಚಾರ ಮಾಡಲು ವಾಹನಗಳ ಅನುಮತಿ ನೀಡಲಾಗಿದೆ, ಇದರಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡಬೇಕು. ಇದರ ಖರ್ಚು ವೆಚ್ಚ ಪಕ್ಷಕ್ಕೆ ಸೇರಿಸಲಾಗುತ್ತದೆ.
ತಾಪಂ ಇಒ ಹಾಗೂ ನೋಡೆಲ್ ಅಧಿಕಾರಿ ಹೊನ್ನಯ್ಯ ಮಾತನಾಡಿ ಅಧಿಕಾರಿಗಳ ಕಣ್ ತಪ್ಪಿಸಿ ಸಭೆ ಸಮಾರಂಭಗಳನ್ನು ರಾಜಾಕೀಯ ಪಕ್ಷದವರು ನಡೆಸುತ್ತಾರೆ ಅದರೆ ನಿಮಗೆ ಮಾಹಿತಿ ನೀಡುವ ನೀರಗಂಟಿಯಿAದ ಸ್ವಚ್ಚತಾ ಕಾರ್ಯಗಾರನಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಬಹುದು ಇನ್ನೂ ಮಾಧ್ಯಮದವರಿಂದ ಮಾಹಿತಿ ಹೊರ ಬಿದ್ದರೆ ನಿಮ್ಮ ವ್ಯಾಪ್ತಿಯ ಕಾರ್ಯ ಕುಂಠಿತ ಎಂದು ಭಾವಿಸಬೇಕಾಗುತ್ತದೆ ಎಂದರು.

ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ರೇಹಾನ್ ಪಾಷಾ, ಕೃಷಿ ಉಪನಿರ್ಧೇಕ ಡಾ ಶಿವಕುಮಾರ್, ವಿರುಪಾಕ್ಷಪ್ಪ, ನಗರಸಭೆ ಪೌರಾಯುಕ್ತ ರಾಮಕೃಷ್ಣ ಮಾಹಿತಿ ನೀಡಿದರು.

About The Author

Namma Challakere Local News
error: Content is protected !!