ಸಮೀಪದ ಜಾಜೂರು ಗ್ರಾಮದ ಗ್ರಾಮದೇವತೆಯಾದ ಕರಿಯಮ್ಮದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಗ್ರಾಮಸ್ಥರು ಭಾನುವಾರ ದೇವಿಯ ಮೂರ್ತಿಗಳಿಗೆ ವೇದಾವತಿ ನದಿಯಲ್ಲಿ ಚಿಲುಮೇನೀರಿನಲ್ಲಿ ದೇವಿಯ ಮೂರ್ತಿಗಳನ್ನು ಶುಭ್ರಗೊಳಿಸಿ ವಿವಿಧ ಒಡವೆ ವಸ್ತçಗಳಿಂದ ಅಲಂಕರಿಸಿ ಹೊಳೆಪೂಜೆ ನೆರವೇರಿಸಿದರು
ಜಾಜೂರು-ತಿಪ್ಪನಹಳ್ಳಿ ಗ್ರಾಮಗಳ ಗ್ರಾಮಸ್ಥರು ಗುಡಿಕಟ್ಟೆಯ ಹಟ್ಟಿ ಯಜಮಾನರು ಹಾಗೂ ಆಂಧ್ರ ಕರ್ನಾಟಕದ ಸಮಸ್ತ ಭಕ್ತಾದಿಗಳು ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಭಾನುವಾರ ದೇವಸ್ಥಾನದ ಬಳಿ ಬಂದು ದೇವಿಯ ಮೂರ್ತಿಗಳನ್ನು ವಿವಿಧ ಜನಪದ ವಾದ್ಯಗಳ ಮೂಲಕ ಸನಿಹದ ವೇದಾವತಿ ನದಿಯಲ್ಲಿ ಚಿಲುಮೇ ತೋಡಿ ಚಿಲುಮೆ ನೀರಿನಿಂದ ದೇವಿಯ ಮೂರ್ತಿಗಳನ್ನು ಶುಭ್ರಗೊಳಿಸಿ ತಂಬಿಟ್ಟು, ನೋರೊಂದು ಎಡೆ, ಹೊಂಬಾಳೆ, ವೀಳ್ಯದೆಲೆ, ಬಾಳೆಹಣ್ಣು ತೆಂಗಿನಕಾಯಿ ದೂಪ ದೀಪಗಳಿಂದ ಹೊಳೆಪೂಜೆ ಕೈಗೊಂಡರು
ಸಂಜೆ ಸರ‍್ಯಾಸ್ತದ ವೇಳೆಗೆ ಗಂಗಾಪೂಜೆಯ ಉತ್ಸವದ ನಂತರ ದೇವಿಯ ಉತ್ಸವ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಗ್ರಾಮಕ್ಕೆ ಕೊಂಡೊಯ್ದು ದೇವಿಯ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಿದರು ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ದೇವಸ್ಥಾನ ಪ್ರದಕ್ಷಿಣೆ ಹಾಕಿ ತಮ್ಮ ಹರಕೆ ಸಲ್ಲಿಸಿದರು
ಗ್ರಾಮದ ವಿವಿಧ ಬೀದಿಗಳನ್ನು ವಿವಿಧ ಬಣ್ಣ ಬಣ್ಣದ ವಿದ್ಯುತ್‌ದೀಪಗಳಿಂದ ಅಲಂಕರಿಸಲಾಗಿತ್ತು ದೇವಸ್ಥಾನವನ್ನು ಬಾಳೆಕಂದು ಮಾವಿನ ಸೊಪ್ಪು ಬೇವಿನಸೊಪ್ಪಿನಿಂದ ಅಲಂಕರಿಸಲಾಗಿತ್ತು
ಭಾನುವಾರ ರಾತ್ರಿಯಿಡೀ ದೇವಿಯ ವೃತ್ತಾಂತವನ್ನು ಸಾರುವ ಕಥನ ಗೀತೆಗಳನ್ನು ಜನಪದರು ಹಾಡಿದರು ದೇವಸ್ಥಾನ ಸಮಿತಿಯವರು ವಿವಿಧ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು
ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಚ್ ಹನುಮಂತರಾಯ, ಕಾರ್ಯದರ್ಶಿ ಸುಂಕದ ಎಚ್ ಓಬಣ್ಣ ಗ್ರಾಪಂ ಸದಸ್ಯರಾದ ಎಸ್ ಟಿ ರಂಜನ್, ಈ ಶಿವಣ್ಣ, ಕೆ ಪ್ರೇಮಲತಾ, ಪಿ ಟಿ ಜಯಲಕ್ಷಿö್ಮÃ, ಬಿ ನರಸಿಂಹಪ್ಪ, ವೈ ಪ್ರೇಮಕ್ಕ, ಚಲುಮಕ್ಕ, ದೇವಸ್ಥಾನ ಸಮಿತಿಯವರು ಗ್ರಾಮಸ್ಥರು ಇದ್ದರು