ಚಳ್ಳಕೆರೆ :
ಕಾರು ಪಲ್ಟಿ ನಾಡೋಜ ಪುರಸ್ಕೃತ ಕಲಾವಿದ ಬೆಳಗಲ್ಲು ವೀರಣ್ಣ ಬಾರದ ಲೋಕಕ್ಕೆ ಪಯಾಣ.
ಚಳ್ಳಕೆರೆ ತಾಲೂಕಿನ ಹಿರೆಹಳ್ಳಿ ಸಮೀಪ ಬಳ್ಳಾರಿಯಿಂದ ಬೆಂಗಳೂರು ಕಡೆಗೆ ಪ್ರಯಾಣ ಮಾಡುವ ಸಂಧರ್ಭದಲ್ಲಿ
ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ನಾಡೋಜ ಪ್ರಶಸ್ತಿ ಪುರಸ್ಕೃತ ಬೆಳಗಲ್ಲು ವೀರಣ್ಣ(೯೧) ಸ್ಥಳದಲ್ಲೇ ಭಾನುವಾರ ಬೆಳಗಿನ ಜಾವ ತಳಕು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದೆ ಕಾರಿನಲ್ಲಿದ್ದ ಬೆಳಗಲ್ಲು ವೀರಣ್ಣ ಅವರು ಪುತ್ರ ಹನುಮಂತಪ್ಪ ಗಾಯಗೊಂಡಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ.
ಬೆಳಗಲ್ಲು ವಿರಣ್ಣ ೧೯೩೬ ಅಕ್ಟೋಬರ್ ೬ ರಂದು ಇವರು ಜನಿಸಿದರು. ತಂದೆ ದೊಡ್ಡ ಹನುಮಂತಪ್ಪ ನಾಟಕ ಕಲಾವಿದರು ಭರತನಾಟ್ಯಗಳಲ್ಲಿ ವೈಲಿಂಗ್ ನುಡಿಸುತ್ತಿದ್ದರು. ವೀರಣ್ಣನವರು ತಂದೆಯ ಆಶಯದಂತೆ ತಮ್ಮ ಎಂಟನೇ ವಯಸ್ಸಿನಲ್ಲೇ ಜಾನಪದ ವೃತ್ತಿಯನ್ನು ಪ್ರದರ್ಶಿಸಿದರು. ರಂಗ ಭೂಮಿಯೇ ಇವರಿಗೆ ಶಾಲೆಯಾಗಿತ್ತು.
ನಂತರ ಅಂಚಿನಲ್ಲಿದ್ದ ತೊಗಲುಗೊಂಬೆ ಆಟಕ್ಕೆ ಜೀವ ತುಂಬಿದರು ಇದು ವೀರಣ್ಣನವರ ಬದುಕನ್ನು ಬದಲಾಯಿಸಿತು. ಇದರಲ್ಲಿ ಹೊಸ ಹೊಸ ಪ್ರಶಂಸೆಯನ್ನು ಜಾರಿ ತಂದರು. ಇನ್ನೊಂದು ವಿಶೇಷತೆ ಎಂದರೆ ಅವರು ತಮ್ಮ ತೊಗಲುಗೊಂಬೆ ಆಟದಲ್ಲಿ ಸ್ವಾತಂತ್ರ್ಯ ಸಂಗ್ರಾಮವನ್ನು ಅಳವಡಿಸಿಕೊಂಡಿದ್ದು. ೧೯೯೧ರಲ್ಲಿ ದೆಹಲಿಯಲ್ಲಿ ಇಂದಿರಾ ಗಾಂಧಿ ಏರ್ಪಡಿಸಿದ್ದ ಪ್ರತಿಷ್ಠಾಪನ ಕಾರ್ಯದಲ್ಲಿ ವೀರಣ್ಣನವರ ಗಾಂಧೀ ಪ್ರದರ್ಶನಕ್ಕೆ ಅನೇಕ ಮಂದಿ ಬೆರಗಾಗಿದ್ದರು.
ಈ ಸಂದರ್ಭದಲ್ಲಿ ರಾಷ್ಟçಪತಿ ಆರ್ ವೆಂಕಟರಾಮನ್ ಈರಣ್ಣನವರನ್ನು ಸನ್ಮಾನಿಸಿ ಗೌರವಿಸಿದ್ದು ತುಂಬ ವಿಶೇಷವಾಗಿದೆ. ೧೯೯೧ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅವರನ್ನು ಗೌರವಿಸಿದೆ. ೧೯೯೨ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ೧೯೯೪ ರಿಂದ ೯೮ ರವರೆಗೂ ವೀರಣ್ಣನವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದಾರೆ.
ಇಂದು ಕಲಾವಿದನೆನಪು ಮಾತ್ರ