ಹೌದು
ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಪಂ ವ್ಯಾಪ್ತಿಯ ಗಂಜಿಗುAಟೆ ಲಂಬಾಣಿ ತಾಂಡದಲ್ಲಿ ಸುಮಾರು ಒಂದು ವರ್ಷದ ಹಿಂದೆ ಇಲ್ಲಿನ ಜನರಿಗೆ ಬೆಳಕು ನೀಡಲೆಂದು ತಾಂಡದಲ್ಲಿ ಹಾಕಿದ ಹೈಮಾಕ್ಸ್ ಬೀದಿ ದೀಪ ಕೆಟ್ಟು ನಿಂತು ವರ್ಷಗಳೆ ಕಳೆದರೂ ದುರಸ್ಥಿ ಭಾಗ್ಯ ಕಂಡಿಲ್ಲ
ಈ ಬಗ್ಗೆ ಗ್ರಾಮಪಂಚಾಯಿ ಕಚೇರಿಗೆ ಅಲೆದಾಡಿದರು ಯಾರೂ.? ಯಾವಾಗ ಹಾಕಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ ಹೈಮಾಕ್ಸ್ ಬೀದಿ ದೀಪ ಅಳವಡಿಸಿದ ಗುತ್ತಿಗೆ ದಾರರು ಗ್ರಾಪಂ ಕಚೇರಿ ವಶಕ್ಕೆ ನೀಡಿಲ್ಲ ಎಂದು ಉತ್ತರ ನೀಡುತ್ತಾರೆ ಈ ಬಗ್ಗೆ ತಾಲೂಕು ಪಂಚಾಯತ್ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಆದರೂ ದುರಸ್ಥಿ ಭಾಗ್ಯ ಕಂಡಿಲ್ಲ.
ಲಕ್ಷಗಟ್ಟಲೆ ಹಣ ವಿನಿಯೊಗಿಸಿ ಅಳವಡಿಸಿರುವ ದೀಪಗಳು ಬೆಳಗದೆ ಕತ್ತಲಿನಲ್ಲಿ ಇದ್ದಂತೆ ಕಂಡುಬರುತ್ತಿವೆ. ಬೆಳಗಿನ ಸಮಯ ಹಾಗೂ ಸಂಜೆ ವೇಳೆ ದೀಪ ಉರಿಯದ ಕಾರಣ ಗ್ರಾಮದಲ್ಲಿ ರಾತ್ರಿ ವೇಳೆ ಮನೆ ಬಿಟ್ಟು ಹೊರಗೆ ಬರುವಂತಿಲ್ಲ ಹೀಗಾಗಿ ಕೂಡಲೇ ಹೈಮಾಸ್ವ್ ದೀಪದ ವ್ಯವಸ್ಥೆ ಸರಿಪಡಿಸಬೇಕು ಎಂದು ಇಲ್ಲಿನ ನಾಗರೀಕರು ಒತ್ತಾಯಿಸಿದ್ದಾರೆ,

ಇನ್ನೂ ಮಾಜಿ ಗ್ರಾಪಂ ಸದಸ್ಯ ಕುಮಾರ್ ಮಾತನಾಡಿ ಇಲ್ಲಿನ ತಾಂಡದಲ್ಲಿ ಇನ್ನೆರಡು ದಿನದಲ್ಲಿ ಹಬ್ಬ ವಿರುದರಿಂದ ಇಲ್ಲಿ ಆನೇಕ ಸಮಸ್ಯೆಗಳಿವೆ ಅದರಲ್ಲಿ ಹೈಮಾಕ್ಸ್ ವಿದ್ಯುತ್ ದೀಪವೊಂದು. ಇದು ಸಂಸದರ ಅನುದಾನದಲ್ಲಿ ಹಾಕಿದ್ದಾರೆ ಎಂಬಮಾಹಿತಿ ಇದೆ ಅಳವಡಿಸಿದ್ದೆ ಗಡಿ ಯಾರು ಇತ್ತ ಇಣಿಕಿ ನೋಡಿಲ್ಲ ಈ ಬಗ್ಗೆ ತಾಪಂ ಹಾಗೂ ಗ್ರಾಪಂ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜವಿಲ್ಲ ಸಂಬAಧಪಟ್ಟ ಅಧಿಕಾರಿಗಳು ಕೂಡಲೆ ಕೆಟ್ಟು ನಿಂತ ಹೈಮಾಕ್ಸ್ ದೀಪವನ್ನು ದುರಸ್ಥಿಪಡಿಸಿ ಇಲ್ಲಿನ ಜನರಿಗೆ ಬೆಳೆಕು ನೀಡುವರೇ ಕಾದು ನೋಡ ಬೇಕಿದೆ.

Namma Challakere Local News
error: Content is protected !!