ಚಳ್ಳಕೆರೆ : ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಮಹಿಳೆಯರು ಅಬಕಾರಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಚಳ್ಳಕೆರೆ ತಾಲೂಕಿನ ಯಾದಲಗಟ್ಟೆ ಗ್ರಾಮದ ಸರಕಾರಿ ಶಾಲೆ ಆವರಣ ಹಾಗೂ ಅಕ್ಕ ಪಕ್ಕದಲ್ಲಿ ಅಕ್ರಮವಾಗಿ ಚಿಕ್ಕ ಚಿಕ್ಕ ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಅಪ್ರಪ್ತರು ಹಾಗೂ ಯುವಕರು ಮದ್ಯಕ್ಕೆ ದಾಸರಾಗಿದ್ದು. ಕೂಲಿ ನಾಲಿಯಿಂದ ಬಂದ ಹಣವನ್ನು ಕುಡಿಯಲಿಕ್ಕೆ ಹಣ ಕಿತ್ತುಕೊಂಡು ಹೋಗುತ್ತಿದ್ದು ಇದರಿಂದ ಕುಟುಂಬದಲ್ಲಿ ನೆಮ್ಮದಿಯಿಲ್ಲದಂತಾಗಿದ್ದು ಸಂಜೆಯಾಗುತ್ತಿದ್ದAತೆ ದಾರಿಯಲ್ಲಿ ಮಹಿಳೆಯರು ಓಡಾಡುವಂತಿಲ್ಲ ಎಂದು ಮಹಿಳೆಯರು ಕಿಡಿ ಕಾರಿದರು.
ಶಾಲಾಭಿವೃದ್ಧಿ ಸಮತಿ ಅಧ್ಯಕ್ಷ ಮಹಂತೇಶ್ ಮಾತನಾಡಿ ಸಂಜೆಯಾಗುತ್ತಿದ್ದAತೆ ಶಾಲಾ ಆವರಣದಲ್ಲಿ ಎಲ್ಲೆಂದರೆಲ್ಲಿ ಕುಡಿಡಿದ ಮದ್ಯದ ಪೌಚ್ಗಳನ್ನು ಬಿಸಾಕಿ ಹೋಗಿರುತ್ತಾರೆ ಬೆಳಗ್ಗೆ ಶಾಲೆಗೆಬರುವ ವಿದ್ಯಾರ್ಥಿಗಳು ಅವುಗಳನ್ನು ಸ್ವಚ್ಚತೆ ಮಾಡಿ ಶಾಲೆಗೆ ಬರುವಂತಾಗಿದೆ. ಶಾಲಾ ಕಾಲೇಜ್ ಹಾಗೂ ಅಂಗನವಾಡಿಗಳ ಸಮೀಪ 200 ಮೀಟರ್ ಮದ್ಯ , ಗುಟ್ಕ ಮಾರಾಟ ಮಾಡುವಂತಿಲ್ಲ ಎಂಬ ಕಾನೂನು ಇದೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಶಾಲಾ ಜಾಗ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಈ ಬಗ್ಗೆ ಅಧಿಕಾರಿಗಳ ಗಮನಸೆಳೆದಾಗ ಬರುತ್ತಾರೆ ಹೋತ್ತಾರೆ ಆದರೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ ಈಗಾಗಲೆ ನಮ್ಮ ಗ್ರಾಮದಲ್ಲಿ ಮದ್ಯ ಕುಡಿತದ ಚಟಕ್ಕೆ ಅನೇಕರು ಬಲಿಯಾಗಿದ್ದಾರೆ ಈಗಲಾದರೂ ಸಂಬAಧ ಪಟ್ಟ ಅಧಿಕಾರಿಗಳು ಕಡಿವಾಣ ಹಾಕದಿದ್ದರೆ ಬೀದಿಗಿಳಿದು ಪ್ರತಿಭಟನೆ ಮಾಡಲಾಗುವುದು ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಯಾದಲಗಟ್ಟೆ ಗ್ರಾಮದ ವರಲಕ್ಷಿö್ಮ, ಕಾಂತಮ್ಮ., ಮಂಜಮ್ಮ, ಗಿರಿಜಮ್ಮ, ಈರಮ್ಮ, ಅಂಬಿಕ, ಜಯಮ್ಮ, ಗಂಗಮ್ಮ ,ಯಾದಲಗಟ್ಟೆ ಜನಗನ್ನಾಥ್, ಚಿಕ್ಕಣ್ನ, ಮಲ್ಲಪ್ಪ, ಭೀಮಪ್ಪ, ರಾಮಣ್ಣ ಇತರರಿದ್ದರು.