ಚಿತ್ರದುರ್ಗ: ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಫೂರ್ತಿ-2023ರ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲೇಖಾ ವೈರ್‌ಲೆಸ್ ಸಲ್ಯೋಷನ್ಸ್ ಪ್ರೆöÊ.ಲಿಮಿಟೆಡ್ ಕಾರ್ಪೋರೇಟ್ ಅಡ್ವೆöÊಸರ್ ಬಿ.ರುದ್ರಮುನಿ ಮಾತನಾಡಿ, ಸ್ಫರ್ಧೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಗೆದ್ದವನು ಬಹುÀಮಾನ ಗಳಿಸಿದರೆ, ಸೋತವನು ಪಾಠವನ್ನು ಕಲಿಯುತ್ತಾನೆ.
ಸೋತವರು ಸುಮ್ಮನಾಗದೇ ಸಕರಾತ್ಮಕ ಮನೋಭಾವದೊಂದಿಗೆ ಮರು ಪ್ರಯತ್ನವನ್ನು ಮಾಡಬೇಕು. ಸೋತಾಗ ಮಾಡಿದ ತಪ್ಪುಗಳ ಕುರಿತು ಅವಲೋಕನ ಮಾಡಿಕೊಳ್ಳಬೇಕು. ಸೋಲಿನಿಂದ ಸ್ಥೆöÊರ್ಯಗೆಡದೆ ಆದರ್ಶ ವ್ಯಕ್ತಿಗಳನ್ನು ಮಾದರಿಯನ್ನಾಗಿಸಿಕೊಂಡು ಗೆಲುವಿಗೆ ಬೇಕಾದ ಅಂಶಗಳ ಕಡೆ ಗಮನ ಹರಿಸಿ ಗೆಲುವನ್ನು ಸಾಧಿಸಬೇಕು ಎಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ.ಭರತ್ ಪಿ.ಬಿ. ಮಾತನಾಡಿ, ಯಾವುದೇ ಕೆಲಸದಲ್ಲಿ ನಮ್ಮ ಪ್ರಯತ್ನ ಬಹು ಮುಖ್ಯವಾದುದು. ಸೋಲಿರಲಿ, ಗೆಲುವಿರಲಿ ನಾವು ನಮ್ಮ ಪ್ರಯತ್ನವನ್ನು ಪ್ರಾಮಾಣಿಕತೆಯಿಂದ ಮಾಡಬೇಕು. ನಾಯಕತ್ವ ಗುಣ ಹೊಂದಬೇಕಾದರೆ ಯಾವುದೇ ಕೆಲಸದಲ್ಲಿ ನಮ್ಮನ್ನು ನಾವು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಮುಖ್ಯ ಸಂಚಾಲಕರಾದ ಡಾ. ಶ್ರೀಶೈಲ, ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಎನ್.ಜಗನ್ನಾಥ, ಪ್ರೊ.ಪೋರಾಳ್ ನಾಗರಾಜ, ಡಾ.ಸಿದ್ದೇಶ್ ಕೆ.ಬಿ., ಡಾ.ಲೋಕೇಶ್ ಹೆಚ್.ಜೆ. ಹಾಗೂ ಡಾ.ಕುಮಾರಸ್ವಾಮಿ ಕೆ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!