ಚಳ್ಳಕೆರೆ : ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೆ ಮೂಲ ಭೂತ ಸೌಲಭ್ಯ ಕಲ್ಪಿಸುವಲ್ಲಿ ನನ್ನ ಅವಧಿಯಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದೆನೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ ಕಂದಾಯ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರದಮಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.
ನಾನು ಕಳೆದ ಹತ್ತು ವರ್ಷದ ಅವಧಿಯಲ್ಲಿ ತಾಲೂಕಿನ ಎಲ್ಲಾ ವರ್ಗದ ಜನರಿಗೆ ಮೂಲ ಭೂತ ಸೌಲಭ್ಯ ಕಲ್ಪಿಸಿದ್ದೆನೆ ಅದರಂತೆ ಕಳೆದ ಹಲವು ವರ್ಷಗಳಿಂದ ಕಂದಾಯ ಗ್ರಾಮಗಲ್ಲಿ ವಾಸಿಸುವ ಜನರಿಗೆ ಯಾವುದೇ ಹಕ್ಕು ಪತ್ರ ಇಲ್ಲದೆ ಅನಾಮದೇಯವಾಗಿ ವಾಸವಾಗಿದ್ದರು ಇಂತಹ ಜನರನ್ನು ಮನಗಂಡು ಸರಕಾರಗಳು ಹಾಗೂ ಸ್ಥಳೀಯ ಪ್ರತಿನಿಧಿಗಳು ನೀಡುವುದು ವಾಡಿಕೆ ಅಂತಹ ಮಹತ್ವದ ಕಾರ್ಯ ಇಂದು ಮಾಡಿದ್ದೆನೆ ಕ್ಷೇತ್ರದ ಸುಮಾರು 1675 ಫಲಾನುಭವಿಗಳಿಗೆ ಇಂದು ಹಕ್ಕು ಪತ್ರ ವಿತರಣೆ ಮಾಡಿದ್ದೆವೆ ಅದರಂತೆ ವಿಕಲ ಚೇತನ ಹಾಗೂ ಹಿರಿಯ ನಾಗರೀಕರ ಸಬಳೀಕರಣದಿಂದ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್, ಬ್ರೆöÊಲ್ ಕಿಟ್, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ, ಯಂತ್ರ ಚಾಲಿತ ದ್ವೀಚಕ್ರ ವಾಹನ ಈಗೇ ಅರ್ಹ ಫಲಾನುಭವಿಗಳಿಗೆ ನೀಡಿದೆ ಎಂದರು.
ಇನ್ನೂ 94ಸಿಸಿ ವ್ಯಾಪ್ತಿಯಲ್ಲಿ ಸುಮಾರು 62 ಹಕ್ಕು ಪತ್ರಗಳನ್ನು 7 ಗ್ರಾಮಗಳ ಫಲಾನುಭವಿಗಳಿಗೆ ನೀಡಿದೆ, ಇನ್ನೂ ನಗರ ಪ್ರದೇಶದಲ್ಲಿ ಸ್ಲಂ ವಾರ್ಡಗಳಲ್ಲಿ ವಾಸಿಸುವ ನಗರವಾಸಿಗಳಿಗೆ ಮುಂದಿನ ದಿನಗಳಲ್ಲಿ ಹಕ್ಕು ಪತ್ರ ನೀಡುವ ಕಾರ್ಯವಾಗುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ಬೋವಿ ಕಾಲೋನಿ, ಕುರುಬರ ಹಟ್ಟಿ, ಹಾಡಿ, ಸುಮಾರು 50 ಕ್ಕೂ ಹೆಚ್ಚು ಸರಕಾರಿ ಹಾಗೂ ಖಾಸಗಿ ಜನವಸತಿ ಪ್ರದೇಶದದಲ್ಲಿ ವಾಸ ಮಾಡುವ ಮಜರೆ ಗ್ರಾಮಗಳನ್ನು ಗುರುತಿಸಿ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮ ಇಲ್ಲವೇ ಗ್ರಾಮದ ಭಾಗವಾಗಿ ಪರಿವರ್ತಿಸಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸರಕಾರ ಮುಂದಾಗಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಸುಮಕ್ಕ , ಉಪಾಧ್ಯಕ್ಷೆ ಮಂಜಳ , ಗ್ರಾಪಂ ಅಧ್ಯಕ್ಷರಾದ ಕಾಟಮಲಿಂಗಯ್ಯ, ಜಯಬಾಯಿ ಕಂದಾಯ ನಿರೀಕ್ಷಕ ಲಿಂಗೇಗೌಡ, ಶಿರಸ್ತೆದಾರ್ ಸದಾಶಿವಪ್ಪ, ಪ್ರಕಾಶ್ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

ಪೋಟೋ ಚಳ್ಳಕೆರೆ ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ ಕಂದಾಯ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರದಮಲ್ಲಿ ಫಲಾನುಭವಿಗಳಿಗೆ ಶಾಸಕ ಟಿ.ರಘುಮೂರ್ತಿ ಹಕ್ಕು ಪತ್ರ ವಿತರಿಸಿ ಮಾತನಾಡಿದರು.

About The Author

Namma Challakere Local News
error: Content is protected !!