ಚಳ್ಳಕೆರೆ : ಕಾಂಗ್ರೇಸ್ ಅಂದರೆ ಭ್ರಷ್ಟಾಚಾರದ ಪಕ್ಷ, ಬಿಜೆಪಿ ಎಂದರೆ ವಿಕಾಸ ಮತ್ತು ಅಭಿವೃದ್ದಿ, ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಅಭಿವೃದಿ ಹೊಂದುತ್ತಿದೆ ಇದನ್ನು ಸಹಿಸಿಕೊಳ್ಳದ ಕಾಂಗ್ರೇಸ್ ಮುಖಂಡರು ಟೀಕೆ ಮಾಡುತ್ತಾರೆ ಎಂದು ಎಂದು ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ವಿಜಯ ಸಂಕಲ್ಪಯಾತ್ರೆ ಅಂಗವಾಗಿ ನಡೆದ ರೋಡ್ ಶೋ ಅಂತ್ಯಗೊಳಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕುಣಿಯಲು ಬಾರÀದವರು ನೆಲ ಡೊಂಕು ಎಂಬAತೆ ವಿದೇಶಕ್ಕೆ ತೆರಳಿ ದೇಶದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂದಿ ಅವರು ಪಕ್ಷದವರಿಂದ ನಾವು ಪಾಠ ಕಲಿಯಬೇಕಾಗಿಲ್ಲ, ಎಂದು ತಿರುಗೇಟು ನೀಡಿದರು.
ವಿದೇಶಿ ನೆಲದಲ್ಲಿ ಪ್ರಜಾಪ್ರಭುತ್ವದ ಕುರಿತು ಟೀಕೆ ಮಾಡಿದ ರಾಹುಲ್ ಗಾಂಧಿ ಭಾರತವನ್ನು ಅಪಮಾನ ಮಾಡಿದ್ದಾರೆ, ಪ್ರಜಾಪ್ರಭುತ್ವ ಉಳಿಸುವಂತೆ ವಿಶೇದ ಎದುರು ಅಂಗಲಾಚಿದ್ದಾರೆ, ಇಂತ ಪಕ್ಷದವರನನ್ನು ನೀವು ಗೆಲ್ಲಿಸುವಿರಾ ಎಂದು ಪ್ರಶ್ನಿಸಿದರು.
ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಡಬಲ್ ಎಂಜಿನ್ ಸರ್ಕಾರ ಅದ್ಬುತ ಕಾರ್ಯಗಳನ್ನು ಮಾಡಿದೆ ಮುಂಬರುವ ಚುಣಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಾಕ್ಸ್ ಮಾಡಿ :
ರಥಯಾತ್ರೆ ಉದ್ದಕ್ಕೂ ಕಾರ್ಯಕರ್ತ ಅಭಿಮಾನಿ ಬಳಗದವರು ಪ್ರಬಲ ಟಿಕೆಟ್ ಆಕಾಂಕ್ಷಿಯಾದ ಎಂ.ಎಸ್.ಜಯರಾA ರವರ ಭಾವ ಚಿತ್ರಗಳನ್ನು ಹಿಡಿದ ಘೋಷಣೆಗಳನ್ನು ಕೂಗಿದರು ಹಾಗೂ ತಹಶೀಲ್ದಾರ್ ಎನ್.ರಘುಮೂರ್ತಿ ಎಂಬ ಜಯ ಘೋಷಗಳು ಮೊಳಗಿದವು ಇನ್ನೂ ನೆಹರು ವೃತ್ತದಲ್ಲಿ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ತಹಶೀಲ್ದಾರ್ ಎನ್.ರಘುಮೂರ್ತಿ ರವರ ಬೆಂಬಲಿಗರು ಕೇಸರಿ ಹಾಗೂ ಹಸಿರು ಬಣ್ಣದ ಬೃಹತ್ ಹೂವಿನ ಮಾಲೆ ಹಾಕುವುದರ ಮೂಲಕ ವರಿಷ್ಠರ ಗಮನ ಸೆಳೆದರು.
ಇದೇ ಸಂಧರ್ಭದಲ್ಲಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟಿಲ್, ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಕಂದಾಯ ಸಚಿವರಾದ ಆರ್.ಅಶೋಕ್ , ಜಿಲ್ಲಾಧ್ಯಕ್ಷ ಮುರುಳಿ, ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾದ ಎಂ.ಎಸ್.ಜಯರಾA, ಜಯಪಾಲಯ್ಯ, ರಾಮದಾಸ್, ಆಕಾಂಕ್ಷಿ ಅನಿಲ್ ಕುಮಾರ್, ಇತರರು ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಇದ್ದರು.
ಪೋಟೋ 1.ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾರವರು ಕಾರ್ಯಕರ್ತರನ್ನು ಕುರಿತು ಮಾತನಾಡಿದರು.
ಪೋಟೋ 2.ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾರವರಿಗೆ ತಹಶಿಲ್ದಾರ್ ಎನ್.ರಘುಮೂರ್ತಿ ಬೆಂಬಲಿಗರು ಬೃಹತ್ ಹೂವಿನ ಮಾಲೆ ಹಾಕಿದರು.
- ವಿಜಯ ಸಂಕಲ್ಪ ಯಾತ್ರೆಯಲ್ಲಿ ಎತ್ತಿನ ಬಂಡಿ ಎಲ್ಲಾರ ಗಮನ ಸೆಳೆಯಿತು.