ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿರವರು ತುರುವನೂರು ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರುವನೂರು ಹೋಬಳಿಯ ತುರುವನೂರು ಗ್ರಾಮದಲ್ಲಿ
ಜಿಲ್ಲಾ ಖನಿಜ ವಿಧಿ ಯೋಜನೆ ಅಡಿ 1.20 ಕೋಟಿ ರೂ.ಗಳ ವೆಚ್ಚದಲ್ಲಿ ಸಿ.ಸಿ. ರಸ್ತೆ ಉದ್ಘಾಟನೆ ಕಾರ್ಯಕ್ರಮ ನೆರೆವೆರಿಸಿದರು, ನಂತರ ತುರುವನೂರು ಗ್ರಾಮದಿಂದ ಕಲ್ಲೆದೇವಪುರ ರಸ್ತೆಯವರೆಗೆ ಪಿ.ಎಂ.ಜಿ.ಎಸ್.ವೈ. ಯೋಜನೆಯಡಿ ಸುಮಾರು 2.5 ಕಿ.ಮೀ. ಉದ್ದದ 1.20 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿ ಉದ್ಘಾಟನೆ ಮಾಡಿದರು, ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಸರ್ಕಾರಿ ಜನರಿಕ್ ಔಷಧ ಮಳಿಗೆಯ ಭೂಮಿ ಪೂಜೆ ನೆರೆವೆರಿಸಿದರು, ಇನ್ನೂ 50.00 ಲಕ್ಷ ರೂಗಳ ವೆಚ್ಚದಲ್ಲಿ ನೂತನವಾಗಿ ಆರಂಭವಾದ ಹಳ್ಳಿ ಸಂತೆ ಮೈದಾನದ ಉದ್ಘಾಟನೆಯನ್ನು ಮಾಡಿದರು.
ಈ ಎಲ್ಲಾ ಕಾಮಗಾರಿಗಳ ಭೂಮಿ ಪೂಜೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಘಾಟನೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬುರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಸವರಾಜ, ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಮುಖಂಡರುಗಳಾದ ಶುಭಾಶ್ ರೆಡ್ಡಿ, ಮಂಜುನಾಥ ಡಿ ಆರ್, ನಾಗರಾಜಪ್ಪ, ರಾಮಕೃಷ್ಣ ರೆಡ್ಡಿ, ವಿವೇಕಪ್ಪ ಮೇಷ್ಟ್ರು, ಶೇಷಾದ್ರಿ ರೆಡ್ಡಿ, ಸಂತೋಷ್, ಮುಖಂಡರು ಮತ್ತು ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.