ಚಿತ್ರುಗರ್ದ ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾಲೇಜಿನ ಮಹಿಳಾ ಘಟಕದ ವತಿಯಿಂದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕರು ಹಾಗೂ ಖ್ಯಾತ ಕವಯತ್ರಿ ಡಾ.ತಾರಿಣಿ ಶುಭದಾಯಿನಿ ಮಾತನಾಡಿ, ಮಹಿಳೆಯರಿಗೆ ಉದ್ಯೋಗ ಸ್ಥಳಗಳಲ್ಲಿ ಆತ್ಮ ಗೌರವದಿಂದ ಕರ್ತವ್ಯ ನಿರ್ವಹಿಸಲು ಸಮಾಜ ಅನುವು ಮಾಡಿಕೊಡಬೇಕು. ಸಮಾಜ ಮಹಿಳೆಯರ ಸಾಧನೆಗೆ ಕಾಲೆಳೆಯದೆ ಸ್ತಿçÃಯರಿಗೆ ಬೆನ್ನೆಲುಬಾಗಿ ನಿಂತುಕೊAಡು ಅವರ ಸಾಧನೆಗೆ ಸಾಥ್ ನೀಡಬೇಕು ಎಂದರು.
ಪ್ರಾAಶುಪಾಲರಾದ ಡಾ. ಭರತ್ ಪಿ.ಬಿ. ಮಾತನಾಡಿ, ನಾವುಗಳು ಸ್ತಿçà ಸಬಲೀಕರಣದ ಕಡೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಮಹಿಳೆಯರು ಸಮಾಜದ ನಿಂದನೆಗಳಿಗೆ ಕಿವಿಗೊಡದೆ ತಮ್ಮನ್ನು ತಾವು ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡು ಮುಂದೆ ಸಾಗಬೇಕು. ಎಂದರು.
ಕಾರ್ಯಕ್ರಮದಲ್ಲಿ ಪ್ರೊ.ಪೋರಾಳ್ ನಾಗರಾಜ್, ಡಾ.ಲೋಕೇಶ್ ಹೆಚ್.ಜೆ, ಪ್ರೊ.ಶೃತಿ ಎಂ ಕೆ, ಪ್ರೊ. ಸುಷ್ಮಿತಾದೇಭ್ , ಸಹನ ಟಿ.ಡಿ. ದೀಪ್ತಿ ತನುಶ್ರೀ ಉಪಸ್ಥಿತರಿದ್ದರು.