ಚಳ್ಳಕೆರೆ : ಕಮಲ ತೊರೆದು ಕಾಂಗ್ರೇಸ್ ಪಕ್ಷದ ಕೈ ಹಿಡಿದ ಬಿವಿ.ಸಿರಿಯಣ್ಣ.
ಹೌದು ಆಯಿಲ್ ಸಿಟಿಯಲ್ಲಿ ರಾಜಾಕೀಯ ದಿನದಿಂದ ದಿನಕ್ಕೆ ರಂಗೇರಿದ್ದು ಚುನಾವಣೆ ಕಾವು ಬಯಲು ಸೀಮೆಯ ಬಿಸಿಲಿಗಿಂತ ಹೆಚ್ಚಾಗಿದೆ, ಉರಿ ಬಿಸಿಲು ಲೆಕ್ಕಿಸದೆ ಪಕ್ಷಾಂತರ ಪರ್ವ ಆರಂಭಿಸಿರುವ ಹಾಲಿ ಶಾಸಕ ಟಿ.ರಘುಮೂರ್ತಿ ಹ್ಯಾಟ್ರೀಕ್ ಬಾರಿಸಲು ಈ ಬಾರಿ ಸಜ್ಜಾಗಿದ್ದಾರೆ.
ಅದರಂತೆ ಈಡೀ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಮುಖಂಡರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಅದರಂತೆ ಇಂದು ಬೆಜೆಪಿ ಮಾಜಿ ಮಂಡಲ ಅಧ್ಯಕ್ಷರಾದ ಬಿವಿ.ಸಿರಿಯಣ್ಣ ರವರನ್ನು ಪಕ್ಷಕ್ಕೆ ಕರೆತಂದಿರುವುದು ಈ ಬಾರಿ ಆಯಿಲ್ ಸಿಟಿಯಲ್ಲಿ ಕೈ ಮಾಡುತ್ತಾ ಕಮಲ್ ಎಂಬAತಾಗಿದೆ.
ಇನ್ನೂ ಕಳೆದ ಹಲವು ವರ್ಷಗಳ ಕಾಲ ಈಡೀ ಕ್ಷೇತ್ರದ ಬಿಜೆಪಿ ಮಂಡಲದ ಅಧ್ಯಕ್ಷತೆ ವಹಿಸಿಕೊಂಡು ಪಕ್ಷ ಸಂಘಟನೆಗೆ ಮುಂಚೂಣಿಯಾಗಿದ್ದ ಸಿರಿಯಣ್ಣ ಆದ್ಯಾಕೋ 2023ರ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿ ಇರುವಾಗಲೇ ಕಮಲ ಬಿಟ್ಟು ಕೈ ಕಡೆ ಮುಖ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಇನ್ನೂ ಈಡೀ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಮಾಡುವ ಮೂರು ಪಕ್ಷದ ನಾಯಕರುಗಳಲ್ಲಿ ಕಾಂಗ್ರೇಸ್ ಮೇಲೈಗೈ ಸಾಧಿಸಿದೆ.
ಕ್ಷೇತ್ರದ ದುರಿಣರನ್ನು ಪ್ರಮುಖ ಮುಖಂಡರನ್ನು ತನ್ನತ್ತ ಸೆಳೆಯುತ್ತಿದೆ. ಇನ್ನೂ 2023ಕ್ಕೆ ಕಾಂಗ್ರೇಸ್ ಹಾಲಿ ಶಾಸಕ ಟಿ.ರಘುಮೂರ್ತಿ ಹ್ಯಾಟ್ರಿಕ್ ಬಾರಿಸುವರಾ ಕಾದು ನೋಡಬೇಕಿದೆ.
ಬಾಕ್ಸ್ ಮಾಡಿ :
ನಿವೃತ್ತ ಪ್ರಾಂಶುಪಾಲರು ಹಾಗೂ ಚಳ್ಳಕೆರೆ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರು ಹಾಗೂ ಗೊಲ್ಲ ಸಮುದಾಯದ ಮುಖಂಡರು ಹಾಗೂ ಗೋಕುಲ ಪತ್ತಿನ ಸಹಕಾರ ಸಂಘದ ಸಂಸ್ಥಾಪಕರಾದ ಬಿ.ವಿ.ಸಿರಿಯಣ್ಣ ಕಾಂಗ್ರೇಸ್ ಸೇರ್ಪಡೆಯಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ನಾನು ಸ್ಥಳೀಯ ಶಾಸಕ ಟಿ.ರಘುಮೂರ್ತಿಯ ಕಾರ್ಯವೈಖರಿಗಳನ್ನು ಮೆಚ್ಚಿ ನಾನು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೆನೆ, ಇವರ ಅವೃದ್ದಿ ಸೂತ್ರಗಳು ಇಡೀ ಜಿಲ್ಲೆಯಲ್ಲಿ ಮಾದರಿಯಾಗಿವೆ ಆದ್ದರಿಂದ 2023ಕ್ಕೆ ಮೊತ್ತಮೆ ರಘುಮೂರ್ತಿ ಗೆಲುವಿಗೆ ನಾವೆಲ್ಲ ಶ್ರಮಿಸಯತ್ತೆವೆ ಎಂದರು.
ಬಾಕ್ಸ್ ಮಾಡಿ :
ಇನ್ನೂ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಈಡೀ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳ ಈಡೀ ಜಿಲ್ಲೆಯಲ್ಲಿ ಮಾದರಿಯಾಗಿವೆ ಇವೆಲ್ಲವುಗಳನ್ನು ನೋಡಿದ ಮುಖಂಡರು ಸ್ವಯಂ ಪ್ರೇರಿತವಾಗಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಮತ್ತೆ ಮೂರನೇ ಬಾರಿಗೆ ಗೆಲ್ಲುವ ವಿಶ್ವಾಸ ನನಗಿದೆ ಎಂದು ತಮ್ಮ ಹಿಂಗಿತ ವ್ಯಕ್ತಪಡಿಸಿದರು.
ಈ ಸೇರ್ಪಡೆ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿಯವರು ಸಮ್ಮುಖದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಬಿ.ವಿ.ಸಿರಿಯಣ್ಣ ,ಹಾಗೂ ಗೋವಿಂದಪ್ಪ ,ಆನಂದ ಚಂದ್ರಣ್ಣ ಶಿವಣ್ಣ,ಹಾಗೂ ಉಪ್ಪಾರಹಟ್ಟಿ ಮುಖಂಡರು ಪಕ್ಷಕ್ಜೆ ಸೇರಿದರು. ಶಾಸಕ ಟಿ.ರಘುಮೂರ್ತಿ ಪಕ್ಷಕ್ಕೆ ಆತ್ಮಿಯವಾಗಿ ಹೂಮಾಲೆ ಹಾಗೂ ಕಾಂಗ್ರೇಸ್ ಪಕ್ಷದ ಚಿಹ್ನೆ ಇರುವ ಶಾಲುಹಾಕಿ ಸ್ವಾಗತಿಸಿದರು.
ಈ ಸಮಯದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ತಾಲ್ಲೂಕು ಗೊಲ್ಲ ಸಂಘದ ಅಧ್ಯಕ್ಷ ರವಿಕುಮಾರ್, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವೀರಭದ್ರಪ್ಪ ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿಟಿ .ಶಶಿಧರ್,ಈರಣ್ಣಸ್ವಾಮಿ ನಿವೃತ್ತ ಮುಖ್ಯ ಶಿಕ್ಷಕ ಮಂಜಪ್ಪ, ಗೋಕುಲ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಣ್ಣ,ನಾಗರಾಜ್ ನಿವೃತ್ತ ಉಪನ್ಯಾಸಕ ಮೂಡಲಗಿರಿಯಪ್ಪ, ಹಾಗೂ ಗೊಲ್ಲ ಸಮುದಾಯದ ಮುಖಂಡರು, ಉಪ್ಪಾರಹಟ್ಟಿ ಮುಖಂಡರು ಗ್ರಾಮಸ್ಥರು ಇದ್ದರು.