ಚಳ್ಳಕೆರೆ : ಪರೀಕ್ಷಾ ಭಯದಿಂದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮ ಹತ್ಯೆಗೆ ಶರಾಣದ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ.
ಪರೀಕ್ಷಾ ಭಯದ ಮಾನಸೀಕ ಖಿನ್ನತೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿ ಸುಶ್ಮಿತಾ 17 ವರ್ಷ ತಮ್ಮ ಮನೆಯಲ್ಲಿ ಮಾರ್ಚ 16ರ ಬೆಳಗಿನ ಜಾವ ಏಳು ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,
ನಗರದ ಶಾಂತಿನಗರದಲ್ಲಿ ವಾಸವಾಗಿದ್ದ ರತ್ನಾಚಾರ್ ಇವರು ಚಿನ್ನ ಬೆಳ್ಳಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು
ಆದರೆ ವಿದ್ಯಾರ್ಥಿನಿ ಮಾನಸಿಕ ಖಿನ್ನತೆಯಿಂದ ಈ ನಿರ್ಧಾರ ತೆಗೆದುಕೊಂಡು ಸಾವಿನ ಮನೆ ಸೇರಿದ್ದಾಳೆ ಎನ್ನಲಾಗಿದೆ. ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ, ಇನ್ನೂ ಸುಶ್ಮಿತಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ ಚಳ್ಳಕೆರೆ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಪಿಎಸ್‌ಐ ಸತೀಶ್ ನಾಯಕ್, ಬಿಎಸ್.ವಿಜಯ್ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ