ಚಳ್ಳಕೆರೆ : ಇಪ್ಪತ್ತು ವರ್ಷದ ಯುವತಿ ನೇಣಿಗೆ ಶರಾಣದ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ.
ಮನೆಯಲ್ಲಿ ಯಾರು ಇಲ್ಲದೆ ಇರುವ ಸಮಯದಲ್ಲಿ ಯುವತಿ ವಿಪರೀತ ಹೊಟ್ಟೆ ನೋವಿನಿಂದ ತಾಳದೆ ಮನೆಯ ಮೆಲ್ಚಾವಣೆ ಪ್ಯಾನ್‌ಗೆ ತನ್ನ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
20 ವರ್ಷ ಹರೆಯದ ಜಾಹ್ನವಿ ಚಳ್ಳಕೆರೆ ನಗರದ ಜ್ಯುವೆಲರಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಮಂಜುನಾಥ್ ಆಚಾರ್ ತಾಯಿ ಮಮತಾ ಇವರಿಗೆ ಮೂರು ಮಕ್ಕಳಿದ್ದು ಮೊದಲನೇ ಮಗಳು ಜಾಹ್ನವಿ ಇವರು ವೃತ್ತಿಯಲ್ಲಿ ಜುವೆಲ್ಲರಿ ಶಾಪ್ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ಯುವತಿಯು ವೈಯಕ್ತಿಕ ಖಾಯಿಲೆಯಿಂದ ಬಳಲುತಿದ್ದಳು ಎನ್ನಲಾಗಿದೆ. ತಂದೆ ತಾಯಿಗಳು ಎಷ್ಟೋ ಬಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಈ ಖಾಯಿಲೆ ವಾಸಿಯಾಗದ ಹಿನ್ನೆಲೆಯಲ್ಲಿ ಈ ಯುವತಿ ವಿಪರೀತ ಹೊಟ್ಟೆ ನೋವು ತಾಳಲಾರದೆ ನೇಣಿಗೆ ಶರಣಾಗಿದ್ದಾಳೆ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನೂ ಈಪ್ರಕರಣ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About The Author

Namma Challakere Local News
error: Content is protected !!