ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ತುರುವನೂರು ಹೋಬಳಿಯ ಪಾಪೆನಹಳ್ಳಿ ಗ್ರಾಮದಲ್ಲಿ ನಡೆದ ಮುಖಂಡರ ಮತ್ತು ಕಾರ್ಯಕರ್ತರ ಕುಂದು ಕೊರತೆಗಳ ಸಭೆಯಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಸೂಕ್ತ ರೀತಿಯ ಪರಿಹಾರವನ್ನು ನೀಡುವಂತೆ ಭರವಸೆ ನೀಡಿದರು.
ಇನ್ನೂ ತಾಲ್ಲೂಕಿನ ಗೊರ್ಲಕಟ್ಟೆ ಗ್ರಾಮದಲ್ಲಿ ನಡೆದ ಮುಖಂಡರ, ಕಾರ್ಯಕರ್ತರ ಸಭೆ ಹಾಗೂ ಮುಖಂಡರು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಮತ್ತು ಶಾಸಕರ ಕಾರ್ಯವೈಖರಿಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ವೀರಭದ್ರಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ್ ಮೂರ್ತಿ, ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜ, ರವಿಕುಮಾರ್, ಜಯಚಂದ್ರ, ಮುಖಂಡರಾದ ಉಮೇಶ, ಕಾಟಯ್ಯ, ಭೀಮಚಂದ್ರ, ಅಜ್ಜಪ್ಪ, ನಿಂಗಣ್ಣ, ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.