ಚಳ್ಳಕೆರೆ : ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಹಂತದ ಯೋಜನೆಗಳ ಫಲಾನುಭವಿಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಸಮ್ಮೆಳನಕ್ಕೆ ಜಿಲ್ಲೆಗೆ ವಿವಿಧ ಗ್ರಾಮಗಳಿಂದ ಫಲಾನುಭವಿಗಳನ್ನು ಕರೆತರುವ ನಿಟ್ಟಿನಲ್ಲಿ ಆಯಾ ತಾಲೂಕಿನಲ್ಲಿ ಸಾರಿಗೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬಸ್ ಸೇವೆ ಹೊದಗಿಸಿರುವುದುರಿಂದ ಗ್ರಾಮೀಣ ಭಾಗದ ಸಾರ್ವಜನಿಕರು ಸಾರಿಗೆ ಇಲ್ಲದೆ ಪರದಾಡುವಂತಾಗಿತ್ತು.
ಇನ್ನೂ ಚಳ್ಳಕೆರೆ ನಗರದ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ದಿನ ಬೆಳಗಾದರೆ ಸಾಕು ನಗರದತ್ತ ಪ್ರಯಾಣ ಬೆಳೆಸುವ ಜನರು ಇಂದು ಮಾತ್ರ ಬಸ್ ಸೇವೆ ಇಲ್ಲದೆ ಹೈರಾಣಾದ ದೃಶ್ಯ ಕಂಡು ಬಂದಿತು.
ಇನ್ನೂ ನಗರದಲ್ಲಿ ಬೆರಳೆಣಿಕೆಯಷ್ಟ ಇರುವ ಖಾಸಗಿ ಬಸ್‌ಗಳ ಟಾಪ್ ಪ್ರಯಾಣ ಬೆಳೆಸಿದ ಪ್ರಯಾಣಿಕರು ಅಂಗೈಯಲ್ಲಿ ಜೀವ ಹಿಡಿದು ಸಾಗುವಂತಾಗಿತ್ತು.
ಈಗೇ ಒಟ್ಟಾರೆ ಮುಖ್ಯಮಂತ್ರಿ ಕಾರ್ಯಕ್ರಮ ಈಡೀ ಜಿಲ್ಲೆಯ ಪ್ರಯಾಣಿಕರಿಗೆ ಸಂಕಷ್ಟ ತಂದಿಟ್ಟುದು ಸತ್ಯ.