ಚಳ್ಳಕೆರೆ ನಗರದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ರೀತಿಯ ವಿಜ್ಞಾನ ಮಾದರಿಗಳನ್ನು ಇಂದು ಪ್ರದರ್ಶಿಸಿದರು

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅತ್ಯುತ್ತಮ 10 ಮಾದರಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರೆಡ್ಡಿ ಬಹುಮಾನಗಳನ್ನು ವಿತರಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಅವರು, ಇಂದು ತಂತ್ರಜ್ಞಾನ ತುಂಬಾ ಬೆಳೆದಿದೆ ಅದರಂತೆ ವೈಜ್ಞಾನಿಕ ಅಧ್ಯಯನಗಳ ಮೂಲಕ ಇಂದಿನ ಮಕ್ಕಳು ದೇಶಕ್ಕೆ ದೊಡ್ಡ ಕೊಡುಗೆ ನೀಡಬೇಕು, ಅದರಂತೆ ಚಳ್ಳಕೆರೆ ತಾಲೂಕು ಕಳೆದ ಹಲವು ವರ್ಷಗಳ ಹಿಂದೆ ಬಯಲು ಸೀಮೆಯಗಿತ್ತು ಆದರೆ ಈಗ ಬದಲಾಗಿ ವಿಜ್ಞಾನ ನಗರಿಯಾಗಿ ಮುಂದುವೆರೆದಿದೆ ಎಂದರು.

ಇನ್ನೂ ಕಾರ್ಯಕ್ರಮದ ಸಂಪೂರ್ಣ ಹೊಣೆಗಾರಿಗೆ ಶಿಕ್ಷಕ ಮಂಜುನಾಥ್ ವಹಿಸಿದ್ದರು.
ವಿಜ್ಞಾನ ಶಿಕ್ಷಕರಾದ ನಾಜೀರ್ , ಪುಣ್ಯ, ಹಾಗೂ ವಾಣಿಶ್ರೀ, ಇತರರು ಇದ್ದರು.

About The Author

Namma Challakere Local News
error: Content is protected !!