ಚಳ್ಳಕೆರೆ : ದಿನನಿತ್ಯ ಹಳ್ಳಿಗಳಿಂದ ನಗರಕ್ಕೆ ಬರುವ ಸಾರ್ವಜನಿಕರ ಹಿತ ದೃಷ್ಠಿಯಿಂದ ಸುಸಜ್ಜಿತವಾದ ಶೌಚಾಲಯ ನಿರ್ಮಿಸಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿದ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದರು, ಗ್ರಾಮೀಣ ಪ್ರದೇಶದಿಂದ ಬಂದ ಸಾರ್ವಜನಿಕರನ್ನು ಗಮದಲ್ಲಿರಿಸಿಕೊಂಡು ನಗರದ ಹೃದಯ ಭಾಗವಾದ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ್ದೆವೆ ಇದನ್ನು ಗುತ್ತಿಗೆದಾರರು ನಿರ್ವಾಣೆ ಮಾಡುವರು ನಗರಸಭೆ ಅಧಿಕಾರಿಗಳು ಇದರ ಮೇಲುಸ್ತೂವಾರಿ ನೋಡುವರು ನಗರದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಆದ್ದರಿಂದ ಸಾರ್ವಜನಿಕರು ಇವರಿಗೆ ಸಹಕರಿಸಬೇಕು ಎಂದರು.
ಇನ್ನೂ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ರಾಘವೇಂದ್ರ, ರಮೇಶ್‌ಗೌಡ, ಮಲ್ಲಿಕಾರ್ಜುನ, ಪೌರಾಯುಕ್ತರು, ಹಾಗೂ ಸಿಬ್ಬಂದಿ ಇತರರು ಇದ್ದರು.