ಚಳ್ಳಕೆರೆ : ಕಾಂಗ್ರೇಸ್ ಪಕ್ಷವು ನುಡಿದಂತೆ ನಡೆದಿದೆ. ಈ ಹಿಂದೆ ಇದ್ದ ಸಿದ್ದರಾಮಯ್ಯ ಸರ್ಕಾರದಲ್ಲಿ ನಾವು ಏನು ಹೇಳಿದ್ದೇವೆಯೋ, ಅದೇ ರೀತಿ ಜನರಿಗೆ ಅನೇಕ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಕೊಟ್ಟಿದೆ ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಡಾ.ಬಿ.ಯೋಗೇಶ್ ಬಾಬು ಹೇಳಿದರು.
ಅವರು ಈಡೀ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ಆಮ್ಮಿಕೊಂಡ ಗ್ಯಾರೆಂಟಿ ಕಾರ್ಡ್ ವಿತರಣೆ ಮಾಡಿ ಮಾತನಾಡಿದರು, ಕಾಂಗ್ರೆಸ್ ಪಕ್ಷವು ಜಾತಿಭೇದವಿಲ್ಲದೆ ಅನ್ನ ಭಾಗ್ಯವನ್ನು ಕರುಣಿಸಿದಂತಹ ಪಕ್ಷವಾಗಿದೆ. ಅಂತಹ ಪಕ್ಷದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ವಿವರಿಸಿ ಸುಳ್ಳುಗಳ ಸರಮಾಲೆಯನ್ನೇ ಹೊದಿಸಿಕೊಂಡು ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತುತ್ತ ಬಿಜೆಪಿ ಪಕ್ಷ ಅಪಪ್ರಚಾರ ಮಾಡುತ್ತಿದೆ. ಯಾವುದೇ ರೀತಿಯ ಬಡ ಜನರಿಗೆ ಅನುಕೂಲವಾಗುವಂತೆ ಯೋಜನೆ ಮಾಡಿಲ್ಲ.
ಇದೀಗ ಒಂದು ಗ್ಯಾಸ್ ಸಿಲಿಂಡರ್ ಬೆಲೆ ರು.1150, 1.ಕೆಜಿ ಅಕ್ಕಿಯ ಬೆಲೆ ರು.50 ಹೀಗೆ ಬೆಲೆ ಏರಿಕೆಗಳ ಮಧ್ಯೆ ಬಡ ಜನರು ಜೀವನ ಮಾಡುವುದು ಕಷ್ಟವಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸರ್ವ ಜನಾಂಗದ ವರ್ಗದವರು ಸಂತೃಪ್ತಿಯಿAದ ಜೀವನ ನಡೆಸುತ್ತಿದ್ದರು. ಆದರೆ ಈಗ ತುಂಬಾ ದುಬಾರಿ ಜೀವನ ನಡೆಸಬೇಕಾಗಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷವು ಬಡವರ ಮನೆಯ ದೀಪವನ್ನು ಉಚಿತವಾಗಿ ನೀಡುತ್ತಿದೆ, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಕೊಡುವುದಾಗಿ ಗ್ಯಾರಂಟಿ ಕಾರ್ಡ್ ಮೂಲಕ ಸಹಿ ಮಾಡಿದೆ ಎಂದರು.