ಚಳ್ಳಕೆರೆ : ಬೆಂಗಳೂರು ಫ್ರೀಡಂ ಪಾರ್ಕನಲ್ಲಿ ಸತತವಾಗಿ 140 ದಿನಗಳಿಂದಲೂ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರು ನಿಶ್ಚಿತ ಪಿಂಚಣಿ ಹಾಗೂ ಆರೋಗ್ಯ ಸಂಜೀವಿನಿ ಯೋಜನೆಗಳನ್ನು ಪಡೆಯಲು ಪ್ರತಿಭಟನೆ ನಡೆಸುತ್ತಿದ್ದು ಫೆ.22. ರಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರಕಾರದ ನಿರ್ಲಕ್ಷ್ಯ ಧೋರಣೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ರಾಯಚೂರು ಜಿಲ್ಲೆಯ ಪಿಂಚಣಿ ವಂಚಿತ ಶಿಕ್ಷಕ “ಶ್ರೀ ಶಂಕರ ಬೋರಡ್ಡಿ ” ಯವರ ಆತ್ಮಕ್ಕೆ ಶಾಂತಿ ಕೋರಿದ ಚಳ್ಳಕೆರೆ ತಾಲೂಕಿನ ಮಾಜಿ ಸೈನಿಕರ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಸಿಬ್ಬಂದಿ ಕೈಗೆ ಕಪ್ಪು ಬಟ್ಟೆಧರಿಸಿ ಮೌನಾಚರಣೆ ಆಚರಿಸಿದರು.
ಇನ್ನೂ ಮಾಜಿ ಸೈನಿಕರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸರೋಜಮ್ಮ , ಜಯಮ್ಮ ಹೆಚ್, ಶಂಕರಲಿAಗಪ್ಪ ಬಿ,ಸುರೇಶ್ ಕುಮಾರ್ ಬಿ ಎಸ್, ಸುರೇಂದ್ರ ಕೆ ಎ, ದ್ಯಾಮಣ್ಣ ಜಿ ಎಸ್ ಇತರರು ಇದ್ದರು.