ಚಳ್ಳಕೆರೆ : ಚುನಾವಣೆ ಹೊಸ್ತಿಲಲ್ಲಿ ದೇವರ ದರ್ಶನ ಭಾಗ್ಯ ಮತದಾರರಿಗೆ ನೀಡುವುದು ಜೆಡಿಎಸ್ ಪಕ್ಷ ಕ್ಷೇತ್ರದಲ್ಲಿ ಮುನ್ನಡೆ ಸಾಗುತ್ತಿದೆ ಎನ್ನುವುದು ಖಚಿತವಾಗಿದೆ, ಇನ್ನೂ ದೇವರ ಕೃಪೆಯಿಂದ ಮತದಾರರನ್ನು ಮನಸೆಲೆಯುವ ಎಲ್ಲಾ ತಂತ್ರಗಾರಿಕೆಗಳು ಆಯಿಲ್ ಸಿಟಿಯಲ್ಲಿ ಭರ್ಜರಿಯಾಗಿ ಗರಿಗೆದರಿವೆ,
ಅದರಂತೆ ಚಳ್ಳಕೆರೆ ಕ್ಷೇತ್ರದಲ್ಲಿ 2023ರ ಅಖಾಡಕ್ಕೆ ಮುನ್ಸೂಚನೆ ನೀಡುವ ಎಲ್ಲಾ ಕಸರತ್ತುಗಳು ನಡೆಯುತ್ತಿವೆ ಅಂತೆಯೇ ವಿವಿಧ ಪಕ್ಷದ ಅಭ್ಯರ್ಥಿಗಳು ತಮ್ಮ ಪಕ್ಷದ ಮುಖಂಡರನ್ನು ಕಾರ್ಯಕರ್ತರನ್ನು ರೆಸಾರ್ಟ್ಗಳಿಗೆ, ಸ್ಟಾರ್ಹೊಟೆಲ್ಗಳಿಗೆ ಇನ್ನೂ ದೇವರ ದರ್ಶನ ಭಾಗ್ಯಕ್ಕೂ ಕಳಿಸುವುದು ಜೆಡಿಎಸ್ ಪಕ್ಷದಿಂದ ಸಾಭಿತುಹಾಗಿದೆ.
ಜೆಡಿಎಸ್ ಪಕ್ಷದ ವತಿಯಿಂದ ಚಳ್ಳಕೆರೆ ಕ್ಷೇತ್ರದ ನಗರಂಗೆರೆ ಗ್ರಾಮಪಂಚಾಯಿತಿ ಉಪ್ಪಾರಟ್ಟಿ ದಾಸನಾಯಕನಹಟ್ಟಿ ಗಾನಪ್ಪನಹಟ್ಟಿ ಕೆಂಚವೀರನಹಳ್ಳಿ ಮಹಿಳಾ ಸಂಘದ ಪದಾಧಿಕಾರಿಗಳಿಗೆ ಬಿಜೆಪಿ ತೊರೆದು ಜೆಡಿಎಸ್ ಬಾವುಟ ಹಿಡಿದ ಮಾಜಿ ಶಾಸಕ ಬಸವರಾಜ್ ಮಂಡಿಮಠ್ ಆಶಯದಂತೆ ಕ್ಷೇತ್ರದ ಮಹಿಳಾ ಮತದಾರರಿಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಿಲಾಗಿದೆ.
ಇನ್ನೂ ತಿರುಪತಿ ದರ್ಶನಕ್ಕೆ ಹೊರಟ ಬಸ್ಗಳಿಗೆ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ಮಾಜಿ ಶಾಸಕ ಬಸವರಾಜ ಮಂಡಿಮಠ ಅಭ್ಯರ್ಥಿ ಎಂ.ರವೀಶ್ ಕುಮಾರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಸವರಾಜ್ ಮಂಡಿಮಠ ಮಾತನಾಡಿ, ಜೆಡಿಎಸ್ ಪಕ್ಷದ ಸಿದ್ಧಾಂತಗಳು ಒಪ್ಪಿ ನಾನು ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದೆನೆ, ಅಭಿಮಾನಿಗಳು ನಮ್ಮ ಕಾರ್ಯಕರ್ತರು ಸಹ ಜೆಡಿಎಸ್ ಪಕ್ಷ ಸೇರಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ ಆದ್ದರಿಂದ ಈ ಬಾರಿ ಚಳ್ಳಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಿಕೊಳ್ಳುವುದೇ ನಮ್ಮ ಗುರಿಯಾಗಿದೆ ಎಂದರು.
ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ರವೀಶ್ಕುಮಾರ್ ಮಾತನಾಡಿ ನಮ್ಮ ಮಾಜಿ ಶಾಸಕರು ಹಾಗೂ ನಮ್ಮ ಪಕ್ಷದ ಹಿರಿಯರ ಮುಖಂಡರ ಆಶಯದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಿಳಾ ಸಂಘಗಳ ಪದಾಧಿಕಾರಿಗಳನ್ನು ತಿರುಪತಿ ಪ್ರವಾಸ ಕಳುಹಿಸಿಕೊಡಲಾಗಿದೆ ನಮ್ಮ ಪಕ್ಷವೂ ನಿರಂತರವಾಗಿ ಜನಪರವಾಗಿ ಕಾರ್ಯನಿರ್ವಹಿಸಿತ್ತು ಕಳೆದ ಬಾರಿ ನಮ್ಮ ಪಕ್ಷದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದಾಗ ರೈತರ ಸಾಲ ಮನ್ನಾ ಮಾಡಿದರು ಅದರಂತೆ ಈ ಬಾರಿ ಅವರು ಮುಖ್ಯಮಂತ್ರಿಯಾದ 24 ಗಂಟೆ ಒಳಗೆ ಸ್ವಸಹಾಯ ಸಂಘಗಳ ಸಾಲವನ್ನು ಮನ್ನಾ ಮಾಡಲಿದ್ದಾರೆ ಹೇಳಿದಂತೆ ನಡೆದುಕೊಳ್ಳುತ್ತಾರೆ ಈಗಾಗಲೇ ಸಾಲಮನ್ನದಿಂದ ಅದೆಷ್ಟು ರೈತರು ಜೀವನ ಸಾಗಿಸುತ್ತಿದ್ದಾರೆ ಈ ಬಾರಿಯೂ ಸಹ ಅವರು ಮುಖ್ಯಮಂತ್ರಿಯಾದರೆ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡುತ್ತಾರೆ ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲ್ಲುವುದು ನಿಶ್ಚಿತ ರಾಜ್ಯದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಹಾಗುತ್ತಾರೆ ಎಂದರು.
ಜೆಡಿಎಸ್ ಘಟಕದ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ ಕಳೆದ ಬಾರಿ ನಮ್ಮ ಪಕ್ಷಕ್ಕೆ ಮತ ನೀಡಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಲ್ಲರ ಸಹಕಾರದಿಂದ ಎರಡನೇ ಸ್ಥಾನಕ್ಕೆ ನಾವು ಬಂದು ನಿಂತೆವು ಆದರೆ ಈ ಬಾರಿ ಕ್ಷೇತ್ರದ ಜನತೆ ನಮ್ಮ ಕೈ ಹಿಡಿಯುತ್ತಾರೆ ನಮ್ಮ ಪಕ್ಷದ ಅಭ್ಯರ್ಥಿ ರವೀಶ್ ಕುಮಾರ್ ಅವರನ್ನು ಗೆಲ್ಲಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ನ ಮುಖಂಡರಾದ ಶ್ರೀಧರಾಚಾರ್ಯ, ಏಕಾಂತ್, ಶ್ರೀನಿವಾಸ್ ಹಾಗೂ ಜೆಡಿಎಸ್ ಪದಾಧಿಕಾರಿಗಳು ಮಹಿಳಾ ಸಂಘಗಳ ಪದಾಧಿಕಾರಿಗಳು