ಪರಶುರಾಮಪುರ ಸಮೀಪದ ನಾಗಪ್ಪನಹಳ್ಳಿಗೇಟ್ ಗ್ರಾಮದ ಮುಖ್ಯವೃತ್ತದಲ್ಲಿ ಕಳೆದ ವರ್ಷದ ಕೆಳಗೆ ದ್ವಿಮುಖ ರಸ್ತೆ ಕಾಮಗಾರಿ ಕೈಗೊಂಡು ಮುಖ್ಯವೃತ್ತದ ಬಳಿ ಮರ‍್ನಾಲ್ಕು ಬೀದಿ ದೀಪಗಳನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು ಅಳವಡಿಸಿದ್ದರು ಆದರೆ ಈಚೆಗೆ ರಾತ್ರಿ ವೇಳೆ ಲಾರಿಯೊಂದು ಮುಖ್ಯವೃತ್ತದ ಬೀದಿ ದೀಪಕ್ಕೆ ಡಿಕ್ಕಿ ಹೊಡೆದಿತ್ತು ಈಗ್ಗೆ ಆರೇಳು ತಿಂಗಳಿAದ ಈ ಕಂಬ ರಸ್ತೆಯ ನಡುವೆ ಬಿದ್ದಿಗೆ ಇತ್ತ ಮರ‍್ನಾಲ್ಕು ಬೀದಿ ದೀಪಗಳೂ ಬೆಳಗುತ್ತಿಲ್ಲ ಕೂಡಲೇ ಎಸ್‌ದುರ್ಗ ಗ್ರಾಪಂ ಅಧಿಕಾರಿಗಳು, ಪಿಡಬ್ಲುö್ಯಡಿ ಇಲಾಖಾಧಿಕಾರಿಗಳು ಇತ್ತ ಗಮನ ಹರಿಸಿ ಸರಿಪಡಿಸಬೇಕು ಎಂದು ಗ್ರಾಮಸ್ಥರಾದ ಹನುಮಂತರಾಯ, ದೇವರಾಜು, ರಾಮಮೂರ್ತಿ, ರಮೇಶ, ಎಸ್ ವೆಂಕಟರೆಡ್ಡಿ, ಗಂಗಣ್ಣ, ಧನಂಜಯ, ಚಂದ್ರಣ್ಣ, ಕೃಷ್ಣಮೂರ್ತಿ, ಎನ್‌ಪಿಗೇಟ್-ಪಿ ಮಹದೇವಪುರ ಗೇಟ್ ಗ್ರಾಮಸ್ಥರು ಪತ್ರಿಕೆಗೆ ದೂರಿದ್ದಾರೆ