ಬೆಳೆಪರಿಹಾರ ರೈತನ ಖಾತೆಗೆ ಹಂತ ಹಂತವಾಗಿ ಬಿಳುತ್ತಿದೆ ಆತಂಕ ಬೇಡ : ತಹಶೀಲ್ದಾರ್ ರೇಹಾನ್ ಪಾಷ
ಚಳ್ಳಕೆರೆ : ಬೆಳೆ ಪರಿಹಾರ ವಿತರಣೆಯಲ್ಲಿ ಬಾರಿ ಮೊತ್ತದ ಹಣ ದುರುಪಯೋಗವಾಗಿರುವ ಬಗ್ಗೆ ಆರೋಪುಗಳು ಕೇಳಿ ಬರುತ್ತಿದ್ದು ಕೂಡಲೆ ತನಿಖೆ ನಡಿಸುವಂತೆ ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿAದ ತಾಲೂಕು ಕಚೇರಿಗೆ ಮನವಿ ನೀಡಿದ್ದಾರೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಅಕಾಲಿಕ ಮಳೆಗೆ ಹಾಗೂ ಅತಿವೃಷ್ಠಿ-ಅನಾವೃಷ್ಠಿಗೆ ಸಿಲುಕು ಬೆಳೆಗಳು ನಷ್ಟವಾಗಿ ರೈತರು ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ.
ಆದರೆ ಬೆಳೆ ಪರಿಹಾರ ಬರುವ ನಿರೀಕ್ಷೆಯಲ್ಲಿ ರೈತಾಪಿ ವರ್ಗ ಕಾಯುತ್ತಿದೆ ಆದರೆ ವರ್ಷ ಕಳೆದರೂ ಇನ್ನೂ ಬೆಳೆ ಪರಿಹಾರ ಬಾರದ ಇರುವುದರಿಂದ ಪರಿಶಿಲನೆ ಮಾಡಿದಾಗ ಬೇರೆಯೊಬ್ಬರ ಖಾತೆಗೆ ಜಮೆಯಾಗಿರುವುದು ಕಂಡು ಬಂದಿದೆ.
ಬೆಳೆಪರಿಹಾರ ನಿಗಧಿ ಮಾಡುವ ಮೊದಲ ಹಂತದಲ್ಲಿ ಗ್ರಾಮ ಲೆಕ್ಕಿಗರು ಹಾಗೂ ಕೃಷಿ ಇಲಾಕೆ ಜಂಟಿಕಾರ್ಯಚರಣೆಯಲ್ಲಿ ತಮ್ಮ ರೈತನ ಹೊಲದಲ್ಲಿ ಬೇಟಿನೀಡಿ ನೀಡಿ ನಿಖರವಾದ ವರದಿಯ ಮೂಲಕ ವರದಿ ಮಾಡಲಾಗಿದೆ,
ಜಿಲ್ಲೆಯ ಚಳ್ಳಕೆರೆ ತಾಲೂಕಿಗೆ ಸುಮಾರು 86.76 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದು ಅರ್ಹ ರೈತರ ಖಾತೆ ಜಮೆ ಮಾಡಿದೆ ಬೇರೋಬ್ಬರ ಖಾತೆಗೆ ಜಮೆ ಮಾಡಿರುವುದು ಬೆಳಕಿಗೆ ಬಂದಿದ್ದು ಇದರಿಂದ ಅರ್ಹ ರೈತರು ಬೆಳೆ ವಿಮೆ ವಂಚನೆ ಯಾಗುವ ಜತೆಗೆ ಸರಕಾರದ ಬೊಕ್ಕಸಕ್ಕೂ ನಷ್ಟವನ್ನುಂಟು ಮಾಡಿದ್ದು ಲೋಕಾಯುಕ್ತ ಇಲಾಖೆಗೆ ವಹಿಸಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಕ್ರಮ ಕೈಕೊಳ್ಳುವಂತೆ ಕರ್ನಾಟ ಕಾರ್ಯನಿತರ ಪತ್ರಕರ್ತರ ಧ್ವನಿ ಸಂಘಟನೆಯ ಕೆ.ಶಿವಕುಮಾರ್, ಈರಣ್ಣ, ರಾಮು, ಆರ್,ದ್ಯಾಮರಾಜ್, ಮಂಜುನಾಥ, ಶಶಿಕುಮಾರ್, ಇತರರು ತಹಶೀಲ್ದಾರ್-ಗ್ರೇಟ್ ಸಂದ್ಯಾ ಇವರ ಮೂಲಕ ಸರಕಾರಕ್ಕೆ ಮನವಿ ಸಲ್ಲಸಿದ್ದಾರೆ.
ಬಾಕ್ಸ ಮಾಡಿ :
ತಾಲೂಕಿನಲ್ಲಿ ಎಲ್ಲಾ ರೈತರಿಗೆ ಬೆಳೆಪರಿಹಾರ ಬರುತ್ತದೆ, ಕೆಲವು ರೈತರಿಗೆ ಮಾತ್ರ ಬೆಳೆಪರಿಹಾರ ವಿಳಂಭವಾಗಿದೆ, ಒಟ್ಟಾರೆ ತಾಲೂಕಿನಲ್ಲಿ 44776 ಫಲಾನುಭವಿಗಳು ಬೆಳೆವಿಮೆ ಕಟ್ಟಿದ್ದಾರೆ, ಅದರಲ್ಲಿ 37845 ರೈತರಿಗೆ ಸು.77 ಕೋಟಿ 31 ಲಕ್ಷ ಪರಿಹಾರ ರೈತರ ಖಾತೆಗೆ ಬಂದಿದೆ, ಇನ್ನೂ 6931 ಜನ ರೈತರಿಗೆ ಮಾತ್ರ ಪರಿಹಾರ ಬರಬೇಕಿದೆ, ಈ ಪರಿಹಾರ ಈಗಾಗಲೇ ಹತ್ತು ಹಂತಗಳಲ್ಲಿ ರೈತನ ಖಾತೆಗೆ ಬಂದಿದೆ ಇನ್ನೂ ಪರಿಹಾರ ನಿರಂತರವಾಗಿ ಎಲ್ಲಾ ರೈತನ ಖಾತೆಗೆ ಬರುತ್ತಿದೆ ಆತಂಕ ಬೇಡ
.—ರೇಹಾನ್ ಪಾಷ್, ತಹಶಿಲ್ದಾರ್ ಚಳ್ಳಕೆರೆ