ಚಳ್ಳಕೆರೆ : ಭಾರತದಲ್ಲಿ ಬೃಹತ್ ಹಿಂದು ಸಾಮ್ರಾಜ್ಯ ಕಟ್ಟಿದ ನಾಯಕ ಛತ್ರಪತಿ ಶಿವಾಜಿ. ಜನರ ಮೇಲೆ ಹೆಚ್ಚಿನ ಹೊರೆಯಾಗದಂತೆ, ತೆರಿಗೆ ಪದ್ದತಿ ಅಳವಡಿಸಿಕೊಂಡು ಜನಪರ ಆಡಳಿತ ನೆಡಿಸಿದ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಛೇರಿಯಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು ಅವರು ಉತ್ತಮ ಸೈನ್ಯ ಸಂಘಟನೆ, ದೇಶಪ್ರೇಮಿ ಹಾಗೂ ಆಡಳಿತಗಾರನಾಗಿ ಶಿವಾಜಿ ರೂಪುಗೊಳ್ಳಲು ತಾಯಿ ಜಿಜಾಬಾಯಿ ಕಾರಣ. ಚಿಕ್ಕದಿನಿಂದಲೇ ಮಹಾಭಾರತ ಹಾಗೂ ರಾಮಯಣ ಕಥೆಗಳನ್ನು ಶಿವಾಜಿಗೆ ಹೇಳಿವುದರ ಮೂಲಕ ದೇಶದ ಸಂಸ್ಕೃತಿಯನ್ನು ಪರಿಚಯ ಮಾಡಿಸಿದಳು ಎಂದರು.
ತಾಯಿ ಜಿಜಾಬಾಯಿ ಒತ್ತಾಸೆಯಂತೆ ಶಿವಾಜಿ ಮರಾಠ ಸಾಮ್ರಾಜ್ಯ ಸ್ಥಾಪನೆ ಮಾಡಿದ. ಶಿವಾಜಿ ಅನುಸರಿಸದ ಗೆರಿಲ್ಲಾ ಯುದ್ಧ ತಂತ್ರ ಜೊತೆಗೆ ಶಕ್ತಿ ಮತ್ತು ಯುಕ್ತಿಯಿಂದಾಗಿ ಸಾಮ್ರಾಜ್ಯ ವಿಸ್ತರಣೆಯಾಯಿತು. ಗೆರಿಲ್ಲಾ ಮಾದರಿ ಯುದ್ದ ತಂತ್ರವನ್ನು ಇಂದಿಗೂ ವಿಶ್ವದ ನಾನಾಕಡೆ ಬಳಸುವುದನ್ನು ನಾವು ಕಾಣಬಹುದು ಎಂದರು. ಇನ್ನೂ ನಗರದಲ್ಲಿ ಛತ್ರಪಯಿ ಸಮುದಾಯಕ್ಕೆ ಸಮುದಾಯ ಭವನ, ಹಾಗೂ ನಿವೇಶನದ ಭಾಗ್ಯ ಮುಂದಿನ ದಿನಗಳಲ್ಲಿ ನೀಡುವ ಭರವಸೆ ನೀಡಿದರು.

ಸಾಮಾಜಿಕ ಚಿಂತಕ ಮೈತ್ರಿ ದ್ಯಾಮಣ್ಣ ವಿಶೇಷ ಉಪನ್ಯಾಸ ನೀಡಿ, ತನ್ನ ಆಡಳಿತದಲ್ಲಿ ಫರ್ಷಿಯನ್ ಭಾಷೆಯ ಬದಲು ಸಂಸ್ಕೃತ ಭಾಷೆ ಪ್ರಾತಿನಿಧ್ಯ ನೀಡಿದ. ಧಾರ್ಮಿಕ ಸುಧಾರಣೆ ಮಾಡಿದ. ಇಂದಿನ ಯುವಕರು ಶಿವಾಜಿಯ ಧೈರ್ಯ ಸಾಹಸಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ರೇಹಾನ್ ಪಾಷ್, ತಹಶಿಲ್ದಾರ್ ., ಮರಾಠ ಸಮುದಾಯದ ಕೆಂಚಾಜಿರಾವೋ, ಜಯಣ್ಣ, ಶ್ರೀನಿವಾಸನ್, ಪ್ರಭು,ಕಿರಣ್ ಕುಮಾರ್, ಸರೋಜಬಾಯಿ, ರೇಖಾ, ಜ್ಯೋತಿ ಪ್ರಸಾದ್, ಮಿನಾಕ್ಷಿ, ರಾಘವ್, ನಾರಾಯಣ್ ರಾವ್, ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ರಮೇಶ್ ಗೌಡ, ಡಿಟಿ.ಭೂತಲಿಂಗಪ್ಪ, ವಿಷ್ಟುಮೂರ್ತಿ, ಶಿವಣ್ಣ, ಇತರರು ಇದ್ದರು.

Namma Challakere Local News
error: Content is protected !!