ಚಳ್ಳಕೆರೆ : ಚುನಾವಣೆಗೆ ಕೇವಲ ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೇ ಆಯಿಲ್ ಸಿಟಿಯಲ್ಲಿ ರಾಜಾಕೀಯ ರಂಗೇರಿದ್ದು ಮೂರು ಪಕ್ಷಗಳಿಂದ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ.
ಅದರಂತೆ ಈಗಾಗಲೇ ಕಳೆದ ಐದು ವರ್ಷಗಳಿಂದ ಮತದಾರರ ಮನಸ್ಸಲ್ಲಿ ಮನೆ ಮಾಡಿದ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ರವೀಶ್ ಕುಮಾರ್ ಕಳೆದ 2018ರಲ್ಲಿ ಕಡಿಮೆ ಅಂತರದಲ್ಲಿ ಅವಕಾಶ ಕಳೆದುಕೊಂಡಿದ್ದ ರವೀಶ್ ಈ ಭಾರಿ ಗೆಲುವಿಗಾಗಿ ಕಳೆದ ಹಲವು ದಿನಗಳಿಂದ ಕ್ಷೇತ್ರದಲ್ಲಿ ಭರ್ಜರಿಯಾಗಿ ರೌಂಡ್ಸ್ ಹೊಡಿಯುತ್ತಿದ್ದಾರೆ.
ಅದರಂತೆ ಈಡೀ ಕ್ಷೇತ್ರದಲ್ಲಿ ಎರಡು ರಾಷ್ಟಿçÃಯ ಪಕ್ಷಗಳ ದುರಾಡಳಿತ ನೋಡಿ ಪ್ರಾದೇಶಿಕ ಪಕ್ಷ ಜೆಡಿಎಸ್ ಈ ಬಾರಿ ರಾಜ್ಯದಲ್ಲಿ ಹಾಗೂ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದ್ದಾರೆ.
ಅದರಂತೆ ತಾಲೂಕಿನ ದುರ್ಗವರ ಗ್ರಾಮದಲ್ಲಿ ಜೆ.ಡಿ.ಎಸ್ ಪಕ್ಷದ ಬೃಹತ್ ಸೇರ್ಪಡೆ ಕಾರ್ಯಕ್ರಮದಲ್ಲಿ ಹಲವಾರು ಮುಖಂಡರು ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಸುಮಾರು 100ಕ್ಕೂ ಹೆಚ್ಚು ಜನ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು
ಈದೇ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾ,ಮಿ, ಶ್ರೀಧರಾಚಾರ್ಯ, ನಗರಸಭೆ ಸದಸ್ಯ ವಿ.ವೈ.ಪ್ರಮೋದ್, ಸಿ.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರಾದ ದುರ್ಗವರ ಲೋಕೇಶ್, ಶಾಂತಮ್ಮ ನಿಂಗಪ್ಪ, ಆರ್.ಮಲ್ಲೇಶ್, ಈರಣ್ಣ, ಓಬಣ್ಣ, ಗೋವಿಂದ, ಮಹೇಶ್, ರಂಜಯ, ಓಬಣ್ಣ ಜಲಿ, ಸುಮಾ ಅಣ್ಣ, ಬುಡ್ಡಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರು ಸೋಮಶೇಖರ್, ಉಪಸ್ಥಿತರಿದ್ದರು

Namma Challakere Local News
error: Content is protected !!