ಚಳ್ಳಕೆರೆ : ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿವತಿಯಿಂದ ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ 5ಜನ ದಲಿತ ವಚನಕಾರರ ಜಯಂತಿ ಆಚರಣೆ ಮಾಡಲಾಯಿತು. ನಂತರ ವಚನಕಾರರಾದ ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ, ಮಾದಾರ ಕೇತಯ್ಯ, ಉರಿಲಿಂಗಪೆದ್ದಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ ಗೌರವ ಸಮರ್ಪಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ರೇಹಾನ್ ಪಾಷಾ, ಇತಿಹಾಸದ ಪುಟಗಳನ್ನು ನಾವು ತಿರುವಿಹಾಕಿದರೆ ಅದರಲ್ಲಿ ದಲಿತ ಸಾಹಿತಿಗಳೆ ಹೆಚ್ಚು ತಮ್ಮ ನೋವನ್ನುಂಡು ಈಡೀ ಜಗತ್ತಿಗೆ ಬೆಳಕನ್ನು ನೀಡಿದ ಮಹಾನ್ ಚೇತನರು ದಲಿತ ವಚನಕಾರರು ಅವರು ಹಾಡಿದ ವಚನಗಳು ಇಂದಿನ ಆಧುನಿಕ ಯುಗಕ್ಕೆ ದಾರಿದೀಪವಾಗಿವೆ ಎಂದರು.
ದಲಿತ ಮುಖಂಡ ಮೈತ್ರಿ ದ್ಯಾಮಣ್ಣ ಮಾತನಾಡಿ, ಈಡೀ ಜಗತ್ತಿನಲ್ಲಿ ವಚನಗಳ ಮೂಲಕ ಕೀರ್ತನೆಗಳನ್ನು ಹಾಡಿಕೊಂಡು, ದೀನ ದಲಿತ ಕಷ್ಟದ ನೋವುಗಳನ್ನು ಹೊರ ಜಗತ್ತಿಗೆ ತೋರಿಸುವಂತ ಪ್ರಯತ್ನ ಅಂದಿನ ವಚನಕಾರರು ಮಾಡಿದ್ದರು ಎಂದರು.
ನಗರಸಭೆ ಉಪಾಧ್ಯಕ್ಷೆ ಮಂಜುಳಾ, ಮಾಜಿ ನಗಸಭೆ ಉಪಾಧ್ಯಕ್ಷ ವಿಜಯಕುಮಾರ್ ಮಾತನಾಡಿದರು.
ಇನ್ನೂ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ. ತಹಸೀಲ್ದಾರ್ ರೇಹಾನ್ ಪಾಷಾ, ದಲಿತ ವಚನಕಾರರ ಕುರಿತು ಮೈತ್ರಿಧ್ಯಾಮಯ್ಯ ಉಪನ್ಯಾಸ ಮಾಡಿದರು. ದಲಿತ ಸಂಘದ ಮುಖಂಡ ಟಿ.ವಿಜಯ್ ಕುಮಾರ್, ಹಳೆನಗರದ ವೀರಭದ್ರಪ್ಪ, ದಲಿತ ಮುಖಂಡರಾದ ಭೀಮಣ್ಣ, ಮಂಜುನಾಥ, ಭೀಮನಕೆರೆ ಶಿವಮೂರ್ತಿ , ಪ್ರಕಾಶ್, ಸಮಾಜಕಲ್ಯಾಣ ಇಲಾಖೆಯ ವ್ಯವಸ್ಥಾಪಕ ದಯಾನಂದ್, ಕಂದಾಯ ರಾಜಸ್ವನಿರೀಕ್ಷಕ ಲಿಂಗೇಗೌಡ, ಪ್ರಕಾಶ್, ಗ್ರಾಮಲೆಕ್ಕಾಧಿಕಾರಿ ಪ್ರಕಾಶ್. ಶ್ರೀನಿವಾಸ್, ಹಾಗೂ ತಾಲೂಕು ಕಚೇರಿ ಸಿಬ್ಬಂದಿಗಳು ಉಪಸ್ಥಿತಿದ್ದರು.
ಬಾಕ್ಸ್ ಮಾಡಿ :
ಮಹಾ ಶಿವರಾತ್ರಿ ಸಾರ್ವತ್ರಿಕ ರಜೆ ಹಿನ್ನೆಲೆಯಲ್ಲಿ ದಲಿತ ವಚನಕಾರರ ಜಯಂತಿ ಆಚರಣೆಗೆ ತಾಲೂಕು ಕಚೇರಿಯ ಬೆರಳೆಣಿಕೆಯಷ್ಟು ಸಿಬ್ಬಂದಿ ಹಾಗೂ ಕೆಲ ದಲಿತ ಮುಖಂಡರು ಹೊರತುಪಡಿಸಿದರೆ, ಅನ್ಯ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಗೈರಾಜರಾತಿ ಎದ್ದು ಕಾಣುತ್ತಿತ್ತು.

Namma Challakere Local News
error: Content is protected !!