ಚಳ್ಳಕೆರೆ : ಕಾಂಗ್ರೇಸ್ ಪಕ್ಷ ದಲಿತ ಪರವಾದ ಪಕ್ಷ ಎಂಬುದು ಮತ್ತೊಂಮ್ಮೆ ಸಾಭಿತು ಪಡಿಸಿದೆ, ದೀನ ದಲಿತರ ಪರವಾಗಿ ಅವರ ಪರ ನಿಲ್ಲುವ ಏಕೈಕ ಪಕ್ಷವೆಂದರೆ ಅದು ಕಾಂಗ್ರೇಸ್ ಪಕ್ಷ ಅಂತಹ ಪಕ್ಷದಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪದವಿಯನ್ನು ದಲಿತರಿಗೆ ನೀಡಿರUವುದು ಶ್ಲಾಘನೀಯ ಎಂದು ಮಾಜಿ ಜಿಪಂ.ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ ಸಂತಸ ವ್ಯಕ್ತಪಡಿಸಿದರು.
ನಗರದ ಶಾಸಕರ ಭವನದ ಆವರಣದಲ್ಲಿ ಫೆ.24ರಂದು ನಡೆಯುವ ಅಭಿನಂಧನಾ ಕಾರ್ಯಕ್ರಮಕ್ಕೆ ಕ್ಷೇತ್ರದ ಎಲ್ಲಾ ಸಮುದಾಯವರಿಗೆ ಹಾಗೂ ಕುಲಭಾಂಧವರಿಗೆ ಕರೆ ನೀಡಿ ಮಾತನಾಡಿದರು, ಸುಮಾರು 75 ವರ್ಷಗಳ ಕಾಲ ದೇಶವನ್ನು ಆಳ್ವಿಕೆ ಮಾಡದ ಕಾಂಗ್ರೇಸ್ ಪಕ್ಷ ದಲಿತಪರವಾಗಿ ಆಡಳಿತ ನಡೆಸಿದೆ, ಅದರಂತೆ ಇಂದು ಮಾದಿಗ ಸಮುದಾಯದ ನಗರಸಭೆ ಸದಸ್ಯ ಕೆ.ವೀರಭದ್ರಯ್ಯ ನವರಿಗೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪದವಿ ನೀಡಿರುವುದು ಸಂತಸ ತಂದಿದೆ ಎಂದರು.
ದಲಿತ ಮುಖಂಡ ಜಿ.ಮಾರಣ್ಣ ಮಾತನಾಡಿ, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮತ್ತೋಂಮ್ಮೆ ದೀನ ದಲಿತರ ಪರವಾಗಿ ಇರುವುದು ಸಾಭಿತು ಪಡಿಸಿದ್ದಾರೆ. ಆದ್ದರಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಮಾದಿಗ ಸಮುದಾಯದ ಮುಖಂಡರು. ಕಾರ್ಯಕರ್ತರು ಮತ್ತು ಕುಲಬಾಂಧವರಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರನ್ನಾಗಿ ನಮ್ಮ ಸಮುದಾಯದವರಾದ ಕೆ.ವೀರಭದ್ರಪ್ಪ ರವರನ್ನು ಆಯ್ಕೆ ಮಾಡಲು ಪ್ರಮುಖ ಕಾರಣಿಕರ್ತರು ಹಾಗೂ ನಮ್ಮ ಸಮುದಾಯದವರ ಬಗ್ಗೆ ಅಪಾರ ಅಭಿಮಾನ ಮತ್ತು ಕಾಳಜಿ ಹೊಂದಿರುವ ಜನಪ್ರಿಯ ಹಾಗೂ ಅಭಿವೃದ್ಧಿ ಹರಿಕಾರರು ಮತ್ತು ಆಧುನಿಕ ಭಗೀರಥರಾದ ಶಾಸಕ ಟಿ.ರಘುಮೂರ್ತಿ ಫೆ.24 ರಂದು ಶಾಸಕರ ಭವನದ ಆವರಣದಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಮಾದಿಗ ಸಮುದಾಯದ ಎಲ್ಲಾ ಮುಖಂಡರು, ಕಾರ್ಯಕರ್ತರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಹಾಗೂ ಪದಾಧಿಕಾರಿಗಳು, ಮಾಜಿ ತಾಲ್ಲೂ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಗಾಮ ಪಂಚಾಯತಿ ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಮತ್ತು ಸಮುದಾಯದ ಪ್ರತಿಯೊಬ್ಬರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ಈದೇ ಸಂಧರ್ಭದಲ್ಲಿ ಜಿಪಂ.ಮಾಜಿ ಸದಸ್ಯ ಪ್ರಕಾಶ್ ಮೂರ್ತಿ ಬಿ.ಪಿ, ಪಿ.ಜಯಪ್ರಕಾಶ್, ಜಿ.ಮಾರಣ್ಣ, ಸಿ.ಜಿ.ಜಯಕುಮಾರ, ಭೂತಲಿಂಗಪ್ಪ, ಓ.ರಂಗಸ್ವಾಮಿ ಮೀರಸಾಬಿಹಳ್ಳಿ, ಪ್ರಕಾಶ್ ಚೌಳೂರು, ಶಿವಣ್ಣ, ಗುಜ್ಜಾರಪ್ಪ, ಇತರರು ಇದ್ದರು.

About The Author

Namma Challakere Local News
error: Content is protected !!