ರೈತರಿಗೆ ಬೆಳಕಿನ ಬೇಸಾಯ ಪದ್ಧತಿಯ ಕಾರ್ಯಗಾರ
ಚಳ್ಳಕೆರೆ : ರೈತರು ತಮ್ಮ ಬೆಳೆಗಳನ್ನು ತಮ್ಮ ಜಾಗತೀಕ ತಾಪಮಾನಕ್ಕೆ ತಕ್ಕಂತೆ ವಿವಿಧ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಕೃಷಿಕರು ಹಾಗೂ ಲೇಖಕರಾದ ಟಿಜಿ.ಎಸ್.ಅವಿನಾಶ್ ಹೇಳಿದರು
ಅವರು ನಗರದ ಪಾವಗಡ ರಸ್ತೆಯ ಶ್ರೀ ಸತ್ಯನಾರಾಯಣ ಏಜೇನ್ಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೆಳಕಿನ ಬೇಸಾಯ ಪದ್ದತಿಯ ಕಾರ್ಯಗಾರದಲ್ಲಿ ಮಾತನಾಡಿದರು, ಒಂದು ವರ್ಷಕ್ಕೆ ಒಂದು ಎಕರೆಯಲ್ಲಿ ಸು.22 ಸಾವಿರ ಕೆಜಿ ಆಹಾರವನ್ನು ಉತ್ಪಾಧಿಸುವ ಸಾಧ್ಯತೆ ರೈತನಿಗೆ ಇದೆ ಆದರೆ ನಮ್ಮ ಪದ್ಧತಿ ಮಾತ್ರ ಬದಲಾಯಿಸಿಕೊಳ್ಳಬೇಕು ಇಂತಹ ಆರು ವಿಧಾನದ ಪದ್ಧತಿಯಿಂದ ಮಾತ್ರ ನಮ್ಮ ರೈತ ಜೀವನ ಹಸನಾಗುತ್ತಿದೆ, ಇಂದಿನ ಬದಲಾಗುತ್ತಿರುವ ಜಾಗತೀಕ ಮಟ್ಟ ಏರುಗತಿಯಲ್ಲಿ ಸಾಗುತ್ತಿದೆ, ವಾತಾವಣದಲ್ಲಾಗುತ್ತಿರುವ ಬದಲವಾಣಿಯಿಂದ ನಮ್ಮ ಕೃಷಿ ಪದ್ದತಿಯನ್ನು ಕಾಪಾಡಿಕೊಳ್ಳುವುದು ಇಂದು ಅನಿವಾರ್ಯವಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ, ಜಿ.ಜೆ.ಸತ್ಯನಾರಾಯಣ, ಚಿತ್ರಲಿಂಗಪ್ಪ, ಎರಿಸ್ವಾಮಿ, ರಂಗಸ್ವಾಮಿ, ರುದ್ರಮುನಿಯಪ್ಪ, ಸುರೇಶ್ ಬಾಬು, ದೇವರಾಜ್ ರೆಡ್ಡಿ, ಇತರರು ಇದ್ದರು.