ಚಳ್ಳಕೆರೆ : ಚಿಕ್ಕ ವಯಸ್ಸಿನಲ್ಲೆ ಮಕ್ಕಳಿಗೆ ಮಾನವೀಯ ಮೌಲ್ಯದ ಗುಣಗಳನ್ನು ಶಿಕ್ಷಕರು ಬಿತ್ತಬೇಕು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಉತ್ತಮ ನಾಗರೀಕನ್ನಾಗಿ ಮಾಡಲು ಪ್ರೇರೆಪಿಸಬೇಕು ಎಂದು ಲೋಕಾಯುಕ್ತ ಎಸ್ಪಿ ಆರ್.ಎನ್.ವಾಸುದೇವ ಹೇಳಿದರು.
ಅವರು ನಗರದ ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ 2022ರ ಸಿರಿ ಸಂಭ್ರಮ ಕಾರ್ಯಕ್ರದಮಲ್ಲಿ ಭಾಗವಹಿಸಿ ಮಾತನಾಡಿದರು, ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ, ಆದ್ದರಿಂದ ನಿಮ್ಮ ಕನಸು ಕೇವಲ ಉನ್ನತ ಹುದ್ದೆ ಅಲಂಕರಿಸುವುದು ಒಂದೇ ಗುರಿಯಾಗದೇ, ಮಕ್ಕಳ ಮನಸ್ಸಿನಲ್ಲಿ ಮಾನವೀಯ ಗುಣಗಳನ್ನು ನಾವು ಬಿತ್ತಬೇಕು, ಅದರಂತೆ ಹೊಂಗಿರಣ ಶಾಲೆಯ ಪರಿಸರ ಹಾಗೂ ಇಲ್ಲಿನ ಶಿಕ್ಷಕ ವರ್ಗ ಉತ್ತಮವಾದ ರೀತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಮುನ್ನೆಡೆ ಸಾದಿಸಿದೆ, ಅದರಂತೆ ಪೋಷಕರ ಸಹಕಾರ ಇನ್ನೂ ಹೆಚ್ಚಿನದಾಗಿ ಇದ್ದರೆ ನಿಮ್ಮ ಮಕ್ಕಳ ಭವಿಷ್ಯಕ್ಕೆ ದಾರಿ ದೀಪವಾಗುವುದು ಎಂದರು.
ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ, ಪೋಷಕರ ದೃಷ್ಠಿಕೋನದಿಂದ ಮಕ್ಕಳ ವ್ಯಾಸಂಗದ ಮಾನದಂಡ ಅಳೆಯದೆ ಮಕ್ಕಳ ವಿವೇಚನಿಗೆ ತಕ್ಕಂತೆ ಅವರ ಭವಿಷ್ಯ ರೂಪಿಸಬೇಕು, ಉತ್ತಮವಾದ ವಾತವಾರಣ ಕಲ್ಪಿಸುವುದು ಆದ್ದರಿಂದ ಮಕ್ಕಳ ಮೇಲೆ ಒತ್ತಡ ಹೇರದೆ ಅವರ ಅಭಿಪ್ರೇರಣೆಗೆ ತಕ್ಕಂತೆ ಹಿಂಬು ನೀಡಬೇಕು ಎಂದರು.
ಡಿವೈಎಸ್ಪಿ ಹೆಚ್.ಬಿ.ರಮೇಶ್ ಕುಮಾರ್ ಮಾತನಾಡಿ, ಮಕ್ಕಳು ಕೇವಲ ಉನ್ನತ ಹುದ್ದೆಗೆರಬೇಕು ಎಂಬ ಬಯಕೆಯಿಂದ ಮಕ್ಕಳಿಗೆ ಶಿಕ್ಷಣ ನೀಡದೆ ಅವರ ವ್ಯಾಸಂಗಕ್ಕೆ, ಅವರ ಮಾನಸಿಕ ಒತ್ತಾಸೆಗೆ ತಕ್ಕಂತೆ ಶಿಕ್ಷಣ ನೀಡಿದರೆ ಮಾತ್ರ ಜೀವನದಲ್ಲಿ ಮಹಾನ್ ವ್ಯಕ್ತಿಗಳಾಗಲು ಸಾಧ್ಯ ಆದ್ದರಿಂದ ಶಿಕ್ಷಣ ಎಂಬುದು ಮೊದಲು ಮನೆಯಿಂದ ಪ್ರಾರಂಭಗೊAಡು ನಂತರ ಶಾಲೆಯತ್ತ ದಾವಿಸುತ್ತದೆ ಆದ್ದರಿಂದ ಪೋಷಕರು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ಉತ್ತಮವಾದ ಪರಿಸರ ಮುಖ್ಯವಾಗುತ್ತದೆ ಎಂದರು.
ಶಾಲೆಯ ಅಧ್ಯಕ್ಷ ರಾಜೇಶ್ ಗುಪ್ತ ಮಾತನಾಡಿ, ಹೊಂಗಿರಣ ಶಾಲೆ ಕೇವಲ ನಾಲ್ಕೇ ವರ್ಷದಲ್ಲಿ ಇಷ್ಟೋಂದು ಅಭಿವೃದ್ದಿ ಸಾಧಿಸಲು ಪೋಷಕರು ಪ್ರಮುಖ ಕಾರಣವಾಗಿದ್ದಾರೆ, ಶಾಲೆಯ ಉತ್ತಮ ಪರಿಸರ, ಉತ್ತಮ ಶಿಕ್ಷಕ ವೃಂಧ ಈಗೇ ಆಡಳಿತ ಮಂಡಳಿಯ ಸಹಕಾರದಿಂದ ಈ ಮೇಲಸ್ತರಕ್ಕೆ ಬರಲು ಸಾಧ್ಯವಾಗಿದೆ ಎಂದರು.
ಇನ್ನೂ ಶಾಲೆಯ ಗೌರವ ಅಧ್ಯಕ್ಷ ಡಿ.ನಾಗಪ್ಪ, ಡಾ.ದೊರೆಪಾಪಣ್ಣ ಮಾತನಾಡಿದರು,
ಇದೇ ಸಂಧರ್ಭದಲ್ಲಿ ಶಾಲೆಯ ಅಧ್ಯಕ್ಷ ಹೆಚ್.ಎಸ್.ರಾಜೇಶ್ ಗುಪ್ತ, ಕಾರ್ಯದರ್ಶಿ ದಯಾನಂದ ಪ್ರಹ್ಲಾದ್, ಸಹಕಾರ್ಯದರ್ಶಿ ತಿಪ್ಪೆಸ್ವಾಮಿ, ಕಿರಣ್‌ಕುಮಾರ್, ಶಾಲೆಯ ಉಪಾಧ್ಯಕ್ಷ ಡಿ.ಮಧುಸುದನ್, ಶಿವಪ್ರಸಾದ್, ಡಾ.ಪಾಪಣ್ಣದೊರೆ, ಡಿ.ಎನ್.ಜಯಚಂದ್ರ, ಚಂದ್ರು, ನರಸಿಂಹಮೂರ್ತಿ, ಕೃಷಿಕ ಪಾಪಣ್ಣ, ಮುಖ್ಯಶಿಕ್ಷಕರಾದ ಡಿವಿ. ಎನ್.ಪ್ರಸಾದ್, ಶೋಭಾ, ಇತರ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂಧ, ಪೋಷಕ ವರ್ಗ ಭಾಗವಹಿಸಿದ್ದರು.