ಚಳ್ಳಕೆರೆ : ನಗರದಲ್ಲಿ ಹೇರಳವಾಗಿದ್ದ ಮಟ್ಕಾ ದಂಧೆ ಹೇರಳವಾಗಿ ಬೆಳೆಯುತ್ತಿದೆ, ಇನ್ನೂ ವಿದ್ಯಾರ್ಥಿಗಳು ಕೂಡ ಆನ್‌ಲೈನ್ ಮಟ್ಕಾದಲ್ಲಿ ತೋಡಗುವು ಆರೋಪಗಳು ಕೇಳಿ ಬರುತ್ತಿವೆ ಆದ್ದರಿಂದ ನಗರದಲ್ಲಿ ಮಟ್ಕಾ ದಂಧೆಗೆ ಕಡಿವಾಣ ಹಾಬೇಕು ಎಂದು ಕನ್ನಡ ರಕ್ಷಣ ವೇಧಿಕೆ ತಾಲೂಕು ಅಧ್ಯಕ್ಷ ಪಿ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಕೆ.ಸತೀಶ್ ನಾಯ್ಕ್ ಗೆ ಮನವಿ ನೀಡಿದ ರಕ್ಷಣವೇದಿಕೆ ಪದಾಧಿಕಾರಿಗಳು ನಗರದಲ್ಲಿ ಯುವ ಜನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಟ್ಕಾ ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು ಎಂದರು.
ಇನ್ನೂ ನಗರದ ಗಾಂಧಿನಗರ, ಅಂಬೇಡ್ಕರ್‌ನಗರ, ಮದಕರಿನಗರ, ರಹಿಂನಗರ, ಹಲವಾರು ನಗರಗಳಲ್ಲೂ ಕೂಡ ಮಟ್ಕಾ ದಂದೆ ಬಹಳ ಜೋರಾಗಿ ಕರಾಳ ದಂಧೆಯಾಗಿಯೂ ನಡೆಯುತ್ತಿದೆ. ಇನ್ನೂ ಈ ಮಟ್ಕಾ ದಂಧೆಯು ಹಳ್ಳಿಗಳಿಗೂ ಕೂಡ ವ್ಯಾಪಿಸುತ್ತಿದೆ. ಪರಿಣಾಮ ಯುವಕರು, ಕಾರ್ಮಿಕರು, ನಿತ್ಯ ಹಣ ಕಳೆದುಕೊಳ್ಳುವುದರ ಜೋತೆಗೆ ಅಪರಾಧ ಕೃತ್ಯಗಳು ಕೂಡ ಹೆಚ್ಚಾಗತೊಡಗುತ್ತಿದ್ದಾವೆ. ಇದಕ್ಕೆ ಕಡಿವಾಣ ಹಾಕಬೇಕು ಆನ್‌ಲೈನ್‌ನಲ್ಲೂ ಕೂಡ ನಡೆಯುತ್ತಿದೆ. ಅಲ್ಲದೆ ಮಟ್ಕಾ ಆಡುವುದಕ್ಕಾಗಿಯೇ ಕೆಲವು ಆ್ಯಪ್‌ಗಳನ್ನು ಬಳಗೆ ಮಾಡಲಾಗುತ್ತಿದೆ. ಹಾಗೂ ಪೋನ್ ಪೇ ಮುಖಾಂತರ ಹಾಗೂ ವಾಟ್ಸ್ ಆಪ್ ಮುಖಾಂತರ ನಂಬರ್‌ಗಳನ್ನು ಹಾಗೂ ಹಣವನ್ನು ವರ್ಗಾವಣೆ ಮಾಡುತ್ತಾರೆ. ಹೀಗಾಗಿ ದಂದೆಕೋರರನ್ನು ಹಿಡಿಯುವುದು ಸುಲಭವಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ ಈ ದಂಧೆಗೆ ಹೆಣ್ಣು ಮಕ್ಕಳು ಕೂಡ ಬಾಗಿಯಾಗುತ್ತಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಪೊಲೀಸ್ ಇಲಾಕೆಗೆ ಮನವಿ ನೀಡಿದರು.
ಇದೇ ಸಂಧರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಪಿ.ಮಂಜುನಾಥ, ಯುವ ಘಟಕ ಅಧ್ಯಕ್ಷ ಲಿಂಗರಾಜು, ಕಾರ್ಮಿಕ ಘಟಕದ ಅಧ್ಯಕ್ಷ ವೀರೇಶ್, ಮಧು, ಪಾಲೇಶಿ, ರಘು, ಸಂಘದ ಎಲ್ಲಾ ಪದಾಧಿಕಾರಿಗಳಿಂದ ಮನವಿ ಸಲ್ಲಿಸಿದರು.