ಚಳ್ಳಕೆರೆ : ರೈತರ ಪಂಪ್‌ಸೆಟ್ಟುಗಳಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್‌ಪೂರೈಕೆ ಮಾಡುವುದಿಲ್ಲ ಎಂದು ಚಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯುತ್ ಸರಬರಾಜು ಉಪ ಕೇಂದ್ರ ಬಳಿ ರೈತರು ಪ್ರತಿಭಟನೆ ಮಾಡಿದರು.
ಉಪ ಕೇಂದ್ರದ ವ್ಯಾಪ್ತಿಯ ರೈತರ ಪಂಪ್ ಸೆಟ್‌ಗಳಿಗೆ ಹಗಲು ವೇಳೆ ನಿರಂತರವಾಗಿ 7 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು, ಕನಿಷ್ಠ 200 ಕೆ.ವಿ ವಿದ್ಯುತ್ ಸರಬರಾಜ್ ಮಾಡಬೇಕು ಆದರೆ ಅದಕ್ಕಿಂತ ಹೆಚ್ಚು ಸಾಮರ್ಥ್ಯ ವಿದ್ಯುತ್ ಸರಬರಾಜ್ ಮಾಡುವುದರಿಂದ ಪದೇ ಪದೇ ರೈತರ ಮೋಟರ್ ಪಂಪ್ ಸೆಟ್‌ಗಳು ಸುಟ್ಟು ಹೋಗುತ್ತಿದ್ದು ಮಂಗಳವಾರ ರಾತ್ರಿ ಹೆಚ್ಚು ವಿದ್ಯುತ್ ಸರಬರಾಜಿನಿಂದ ವಿಶ್ವೇಶವರಪುರ ಗ್ರಾಮದ ಸುಮಾರು 32 ಮೋಟರ್ ಪಂಪ್ ಗಳು ಸುಟ್ಟು ಹೋಗಿವೆ ಇದರಿಂದ ಪದೇ ಪದೇ ರೈತರಿಗೆ ನಷ್ಟವಾಗುತ್ತಿದೆ ಎಂದು ರೈತರಾದ ಈಶ್ವರಪ್ಪ ಆರೋಪ ಮಾಡಿದರು.

ಇನ್ನೂ ರೈತ ನರಸಿಂಹಮೂರ್ತಿ ಮಾತನಾಡಿ, ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ 7ಗಂಟೆ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡುವಂತೆ ಸರ್ಕಾರದ ಆದೇಶವಿದೆ. ಕಾಡು ಪ್ರಾಣಿಗಳು ಮತ್ತು ವಿಷ ಜಂತುಗಳ ಹಾವಳಿ ಹೆಚ್ಚಿರುವ ಕಾರಣ ರಾತ್ರಿ ವೇಳೆ ಬದಲು ಹಗಲಿನ ವೇಳೆ ವಿದ್ಯುತ್ ನೀಡಬೇಕು. ವಿದ್ಯುತ್ ಬಿಡುಗಡೆಯಲ್ಲೂ ಕರ್ನಾಟಕ ವಿದ್ಯುತ್ ಸರಬರಾಜ ಸಿಬ್ಬಂದಿ ತಾರತಮ್ಯ ನೀತಿ ಅನುಸರಿಸುತ್ತಿದ್ದು, ರೈತರು ಸಿಬ್ಬಂದಿಗೆ ಅಥವಾ ಲೈನ್‌ಮ್ಯಾನ್‌ಗಳಿಗೆ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ವಿದ್ಯುತ್ ಅವಘಡಗಳು ಸಂಭವಿಸಿದರೆ ರೈತರು ಯಾರಿಗೆ ಹೇಳಬೇಕು ಎಂದು ಪ್ರತಿಭಟನಕಾರರು ಅಕ್ರೋಶ ವ್ಯಕ್ತಪಡಿಸಿದರು
ಇನ್ನೂ ಪ್ರತಿಭಟನೆಯಲ್ಲಿ ಓಂಕಾರಿ, ಲಕ್ಷ್ಮಿಪತಿ, ಕೆಂಚಪ್ಪ, ವಿಶ್ವ.ಸಿದ್ದಪ್ಪ ಈಶ್ವರಪ್ಪ, ನರಸಿಂಹಮೂರ್ತಿ, ರಾಜಕುಮಾರ, ವೆಂಕಟೇಶ್‌ರೆಡ್ಡಿ, ಇತರರು ಇದ್ದರು.

About The Author

Namma Challakere Local News
error: Content is protected !!