ಚಳ್ಳಕೆರೆ : ತಾಲೂಕಿನ ತಳಕು ಬೆಸ್ಕಾಂ ಉಪವಿಭಾಗ ಎಇಇ ಕಚೇರಿಗೆ, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ರಾಜ್ಯ ರೈತ ಸಂಘ ಕಛೇರಿ ಮುಂದೆ ಪ್ರತಿಭಟನೆ ಮಾಡಿದರು.
ಇನ್ನೂ ಕಚೇರಿ ಸಿಬ್ಬಂದಿಗಳು, ಗುತ್ತಿಗೆದಾರರು ಸಾರ್ವಜನಿಕರು ದೂರವಾಣಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ವಿದ್ಯುತ್ ಸಮಸ್ಯೆ ದುರಸ್ಥಿಗೆ ಎಲ್ಸಿ ನೀಡುತ್ತಿಲ್ಲ ಗುತ್ತಿಗೆದಾರನಲ್ಲದ ಗುತ್ತಿಗೆದಾರನಿಗೆ ಕೆಲಸ ನೀಡುತ್ತಾರೆ ಯಾವುದೇ ಕಾಮಗಾರಿ ಪರಿಶೀಲನೆಗೆ ಹೋಗುವಾಗ ವಾಹನದಲ್ಲಿ ಗುತ್ತಿಗೆದಾರನನ್ನು ಕರೆದುಕೊಂಡು ಹೋಗುತ್ತಾರೆ ನೊಂದಾಯಿತ ಸ್ಥಳಿಯ ಗುತ್ತಿಗೆ ದಾರರಿಗೆ ಕೆಲಸ ನೀಡುತ್ತಿಲ್ಲ. ಕಂಪನಿಯ ನಿಯಮಗಳನ್ನು ಗಾಳಿಗೆ ತೂರಿ ಕೆಲಸಗಳನ್ನು ಮಾಡಲಾಗುತ್ತಿದೆ.
ಕೂಡಲೆ ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಬೆಸ್ಕಾಂ ಎಇಇ ವಿರುದ್ದ ಪ್ರತಿಭಟನೆ ನಡೆಸಿ ಅಕ್ರೋಶವ್ಯಕ್ತಪಡಿಸಿದರು.
ಈದೇ ಸಂಧರ್ಭದಲ್ಲಿ ಎಸ್,ನರಸಿಂಹಯ್ಯ, ಗೋಣಿಪ್ಪ, ಜಿ.ಪಾಲಯ್ಯ, ಶ್ರೀನಿವಾಸ್, ದಾದಪೀರ್, ಇತರರು ಇದ್ದರು.