ಚಳ್ಳಕೆರೆ : ರಾತ್ರಿ ವೇಳೆಯಲ್ಲಿ ಅನಾಮದೇಯ ವಾಹನಕ್ಕೆ ಸಿಲುಕಿ ಮೃತಪಟ್ಟ ಅನಾಥ ವ್ಯಕ್ತಿಯ ಶವವನ್ನು ಚಳ್ಳಕೆರೆ ಪೊಲೀಸರು ಶವ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು ನಿಜಕ್ಕೂ ಶೋಚನೀಯ ಪೊಲೀಸ್ ಎಂದರೆ ಕೇವಲ ಶಿಕ್ಷೆ ನೀಡುವವರು ಎಂಬ ಅಪಸ್ವರ ಕೇಳುವ ಈ ಯುಗದಲ್ಲಿ ಮನುಷ್ಯನ ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಿರುವುದು ಶ್ಲಾಘನೀಯ.
ಚಳ್ಳಕೆರೆ ನಗರದ ಹೊರವಲಯದ ಪೂಜಾ ಡಾಬ ಬಳಿ ಬೆಳಗಿನ ಜಾವ ಸುಮಾರು ಮೂರು ಗಂಟೆ ಸಮಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿಯೋರ್ವ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ, ಶವ ರಸ್ತೆ ಮೇಲೆ ಬಿದ್ದಿರುವುದನ್ನು ಅದೇ ದಾರಿ ಮಾರ್ಗವಾಗಿ ಮುಂಜಾನೇ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳ ಪರೀಶಿಲನೆ ನಡೆಸಿದಾಗ
ಅನಾಮದೇಯ ಬಿಕ್ಷುಕ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಅಪಘಾತವಾಗಿ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ.
ಈ ವ್ಯಕ್ತಿಗೆ ಸುಮಾರು 60 ವರ್ಷ ವಯಸ್ಸು, ಇರುವುದು ಕಂಡು ಬಂದಿದೆ. ಇನ್ನೂ ಇಂತಹ ಮೃತ ದೇಹವನ್ನು ಚಳ್ಳಕೆರೆ ಪೊಲೀಸರು ನಗರಸಭೆ ವ್ಯಾಪ್ತಿಯ ಸ್ಮಾಶನದಲ್ಲಿ ಪೌರಕಾರ್ಮಿಕರೊಟ್ಟಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವ್ಯಕ್ತಿಯ ಚಹಾರೆ :
ಕೋಲು ಮುಖ, ಎಣ್ಣೆಗೆಂಪು ಬಣ, ತಲೆಯಲ್ಲಿ ಸುಮಾರು 7 ಇಂಚು ಉದ್ದದ ಬಿಳಿ ಕೂದಲು, ಹಾಗೂ ಬಿಳಿ ಮೀಸೆ ಮತ್ತು ಗಡ ಇರುತ್ತದೆ. ಮೃತನ ಮೈ ಮೇಲೆ ಒಂದು ಹಳೆಯ ಷರ್ಟ್ ಇರುತ್ತದೆ. ಸದರಿ ಅನಾಮಧೇಯ ಗಂಡಸಿನ ವಾರಸುದಾರರು ಯಾರೂ ಗೊತ್ತಾಗದೆ ಇದ್ದುದರಿಂದ ನಾನು ತಡವಾಗಿ ಬಂದು ದೂರು ನೀಡಿರುತ್ತೇನೆ, ಅಪಘಾತ ಪಡಿಸಿದ ಯಾವುದೋ ವಾಹನ ಮತ್ತು ಅದರ ಚಾಲಕನಿಗೆ ಹಾಗೂ ಅನಾಮಧೇಯ ಗಂಡಸಿನ ಹೆಸರು ವಿಳಾಸವನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ ಎಂದು ಇದು ದೂರಿನ
ಮೇರೆಗೆ ಚಳ್ಳಕೆರೆ ಠಾಣೆ ಮೊ ನಂ 55/2023 ಕಲಂ : 279, 304(ಎ) ಐಪಿಸಿ ರೆ/ವಿ 187 ಐಎಂವಿ ಆಕ್ಟ್ ಪ್ರಕಾರ ಕೇಸು ದಾಖಲು ಮಾಡಿರುತ್ತದೆ. ವಾರಸುದಾರಿಲ್ಲ ಕಾರಣ ಠಾಣೆಯ ಪಿಐ ದೇಶಾಯಿ ನೇತೃತ್ವದಲ್ಲಿ ಎಎಸ್ಐ ನಾಗರಾಜ್ .ಸಿಬ್ಬಂದಿ ಕೃಷ್ಣ ಅಂತ್ಯಸAಸ್ಕಾರ ಮಾಡಿದ್ದಾರೆ