ಚಳ್ಳಕೆರೆ: ಕೇವಲ ಎರಡು ದಿನ ಕಳೆದರೆ ಹೊಸ ಜೀವನಕ್ಕೆ‌ ಕಾಲಿಡುವ ನವ ಯುವಕ ಜವರಾಯನ ಅಟ್ಟಹಸಾಕ್ಕೆ ಅಪಘಾತಕ್ಕಿಡಾಗಿದ್ದಾನೆ.

ಹೌದು ಫೆ.12 ರಂದು ಮಧುವೆ ನಿಗಧಿಯಾಗಿತ್ತು ಚಳ್ಳಕೆರೆ‌ ನಗರದ ಕಾಟಪ್ಪನಹಟ್ಟಿಯ
ಆಟೋಚಾಲಕ
ಮಂಜುನಾಥ(27)
ರಸ್ತೆಯ ಅಪಘಾತದಲ್ಲಿ ಸಾವಿಗಿಡಾಗಿದ್ದಾನೆ.

ತಾಲ್ಲೂಕಿನ ನಾಯಕನಹಟ್ಟಿ
ಹೊಸೂರುತಾಂಡದ ಕಣಿವೆ ಮಾರಮ್ಮ ದೇವಾಸ್ಥಾನ ಸಮೀಪ ಚಳ್ಳಕೆರೆ
ಕಡೆಯಿಂದ ಬಂದ ಯಮರೂಪಿ ಲಾರಿಯೊಂದು
ಬೈಕ್ ಗೆ ಡಿಕ್ಕಿ ಒಡೆದ‌ ಹಿನ್ನೆಲೆಯಲ್ಲಿ ಮಂಜುನಾಥ್ ಸ್ಥಾಳದಲ್ಲೆ ಸಾವನ್ನಪ್ಪಿದ್ದಾನೆ.

ಇನ್ನೂ ಮಧುವೆ ಸಂಭ್ರಮದಲ್ಲಿದ್ದ ಬಂಧು ಬಳಗಕ್ಕೆ ಬರಸಿಡಿಲು ಬಡಿದಂತಾಗಿ ಸಂಭ್ರಮದ ಮನೆಯಲ್ಲಿ ಕರಿಚಾಯೆ ಆವರಿಸಿದೆ.

ಇನ್ನೂ ಎರಡು ದಿನದಲ್ಲಿ ಮಧುವೆ‌ಗೆ ಸಜ್ಜಾಗಿ ಕನಸಿನ ಅರಮನೆಯಲ್ಲಿ
ಸಂಭ್ರಮದಲ್ಲಿರಬೇಕಾದ ಯುವಕ ಸಾವಿನ ಮನೆ ಸೇರಬೇಕಾಯಿತು.

ಮಧುವೆಗೆ ಆಹ್ವಾನಿಸಿ ಮರಳಿ ಬರುವಾಗ ಈ ದುರ್ಘಟನೆ‌ ಜರುಗಿದೆ.

ಮಧುವೆ ಮನೆಯಲ್ಲಿ ಸಂಭ್ರಮದಿಂದ ಓಡಾಡಬೇಕಿದ್ದ ಸಂಬಂಧಿಕರು ಶವಗಾರ ಕೊಠಡಿಯ ಮುಂದೆ ಅಕ್ರಂದನ ರೋಧನೆ ಮುಗಿಲು ಮುಟ್ಟಿದೆ.

ನೂರಾರು ಕನಸುಗಳನ್ನು ಹೊತ್ತು ಹಸಿಮಣೆ ಏರಬೇಕಿದ್ದ ಮಧುಮಗ ಲಾರಿ ಚಾಲಕನ ಅಜಾಗರೂಕತೆಯಿಂದ ಇಂದು ಸಾವಿನ ಮನೆ ಸೇರಬೇಕಾಗಿದೆ.

ಫೆ.12 ರಂದು ಭಾನುವಾರ ಯುವಕನಿಗೆ ವಧುವಿನ
ಗ್ರಾಮವಾದ ರಾಯದುರ್ಗದಲ್ಲಿ ವಿವಾಹ ಆಗಬೇಕಿತ್ತು. ಆದರೆ, ಲಗ್ನಪತ್ರಿಕೆ ನೀಡಬೇಕು
ಎಂದು ಮುಂಜಾನೆಯೇ ನಾಯಕನಹಟ್ಟಿ ಕಡೆಗೆ ಹೋಗಿದ್ದಾನೆ. ಆದರೆ ಮರಳಿ ಬರುವಾಗ ಇಂತಹ ದುರ್ಘಟನೆ ಸಂಭವಿಸಿದೆ‌.

ಇನ್ನೂ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Namma Challakere Local News
error: Content is protected !!