ಯಲಗಟ್ಟೆ ಗೊಲ್ಲರಹಟ್ಟಿ ಶಾಲೆಯಲ್ಲಿ ಕ್ಲಸ್ಟರ್ ಹಂತದ ಕಲಿಕಾ ಮೇಳಕ್ಕೆ ಬಿಇಓ. ಕೆಎಸ್.ಸುರೇಶ್ ಚಾಲನೆ
ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗೊಲ್ಲರಹಟ್ಟಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಹಂತದ ಕಲಿಕಾ ಮೇಳವನ್ನು ಆಯೋಜಿಸಲಾಗಿತ್ತು..
ಈ ಮೇಳಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆಎಸ್.ಸುರೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಈ ಮೇಳದಲ್ಲಿ ಗೊಂಬೆ, ಕುಣಿತ, ಹುಲಿವೇಷ, ಕೋಲಾಟ ಲಾವಣಿಮಕ್ಕಳಿಂದ ಈಗೇ ವಿವಿಧ ಸಾಂಸ್ಕೃತಿಕ ಕಲಾ ಮೇಳಗಳು ಈ ಕಾರ್ಯಕ್ರಮದಲ್ಲಿ ಕಂಡು ಬಂದವು
ಈ ಕಾರ್ಯಕ್ರಮವು ಅದ್ದೂರಿಯಾಗಿ ಚಾಲನೆಗೊಂಡು ಮಕ್ಕಳಿಗೆ ಕಲಿಕಾ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿತು.
ಈ ಕಾರ್ಯಕ್ರಮಕ್ಕೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಶಿಧರ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಅಧ್ಯಕ್ಷ ಮಾರುತೇಶ್, ತಾಲೂಕು ಅಧ್ಯಕ್ಷ ಮಹಾಲಿಂಗಪ್ಪ, ಇಸಿಓ ರವಿಶಂಕರ್, ಗಿರೀಶ್ ಬಾಬು, ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ, ರಮೇಶ್, ದೇವರಮರಿಕುಂಟೆಯ ಸಂಪನ್ಮೂಲವ್ಯಕ್ತಿಗಳಾದ ಬಿ. ನಾಗರಾಜ್ ಶಾಲಾ ಶಿಕ್ಷಕರಾದ ಟಿ. ಶಿವಕುಮಾರ್, ಮಂಜುಳಾ , ಭೂತೇಶ್ ತಿಪ್ಪೇರುದ್ರಪ್ಪ, ಹಾಗೂ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.