ಚಳ್ಳಕೆರೆ : ಕಳೆದ ಹಲವು ವರ್ಷಗಳಿಂದ ಮತದಾನ ಪ್ರಕ್ರಿಯೆ ಜಾರಿಯಲ್ಲಿದೆ ಸಂವಿಧಾನ ಬದ್ದವಾದ ಮತದಾನದ ಹಕ್ಕು, ಪ್ರಜಾಪ್ರಭುತ್ವಕ್ಕೆ ದಾರಿದೀಪವಾಗಿದೆ ಆದ್ದರಿಂದ ಪ್ರತಿಯೊಬ್ಬರು ಮತದಾನವನ್ನು ಮಾಡಬೇಕು ಎಂದು ಚುನಾವಣೆ ಅಧಿಕಾರಿ ಬಿ.ಆನಂದ್ ಹೇಳಿದ್ದಾರೆ.
ಅವರು ನಗರದ ತಾಲೂಕು ಕಛೇರಿಯಲ್ಲಿ ಸಾರ್ವಜನಿಕರಿಗೆ ಆಮ್ಮಿಕೊಂಡಿದ್ದ ವಿವಿಪ್ಯಾಟ್ ಪ್ರಾತ್ಯಕ್ಷಿಕೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ವಿವಿಪ್ಯಾಟ್ ಪ್ರಾಯೋಗಿಕವಾಗಿ ಬಳಸಿದರೂ 2001ರಲ್ಲಿ ಸಾರ್ವಥಿಕ ಚುನಾವಣೆಗಳಿಗೆ ಬಳಕೆ ಮಾಡಲಾಯಿತು. ಮತದಾನ ಜಾರಿ ಬಂದ ತರುವಾಯ ಬ್ಯಾಲೆಟ್ ನಮೂನೆಯ ಮೇಲೆ ಸೀಲ್ ಹಾಕುವುದರ ಮೂಲಕ ಮತದಾನ ಮಾಡುತ್ತಿದ್ದರು ಆದರೆ ಬದಲಾದ ಯುಗಮಾನಗಳಲ್ಲಿ ಯಂತ್ರಗಳ ಮೂಲಕ ಮತದಾನ ಮಾಡುತ್ತಿದ್ದೆವೆ ಆದ್ದರಿಂದ ಪ್ರತಿಯೋಬ್ಬರು ಮತದಾನದಿಂದ ಹಿಂದೆ ಸರಿಯದಂತೆ ಮತದಾನ ಜಾಗೃತಿ ಜಾಥಗಳ ಮೂಲಕ, ವಿವಿಪ್ಯಾಟ್ ತರಬೇತಿಯ ಮೂಲಕ ಹರಿವೂ ಮೂಡಿಸಲಾಗುತ್ತದೆ ಹೊಸದಾಗಿ ಮತದಾನ ಮಾಡುವ ವಯಸ್ಕರರು ಹಾಗೂ ಈಗಾಗಲೇ ಮತದಾನ ಮಾಡಿರುವ ಯುವ ಮನಸ್ಸುಗಳು ಒಟ್ಟಾರೆ ತಾವು ಮತದಾನ ಮಾಡುವುರ ಜೋತೆಗೆ ತಮ್ಮವರನ್ನು ಮತದಾನ ಮಾಡಿಸಬೇಕು ಎಂದರು.
ಇನ್ನೂ ತಹಶಿಲ್ದಾರ್ ರೇಹಾನ್ ಪಾಷ್ ಮಾತನಾಡಿ, ವಿವಿಪ್ಯಾಟ್ ಯಂತ್ರವೂ ಸುಲಭ ಮತ್ತು ಸರಳಿಕರಣವಾಗಿದೆ ಇದರಿಂದ ಮತದಾನ ಏಣಿಕೆಯ ಕಾರ್ಯವನ್ನು ಸುಗಮಗೊಳಿಸಿದೆ, ಮತದಾನ ಮಾಡಿದ ಏಳು ಸೆಂಕೆಡ್‌ಗಳ ಒಳಗೆ ಯಾರಿಗೆ ಮತದಾನ ಮಾಡಿದ್ದೆವೆ ಎಂಬುದನ್ನು ಖಾತ್ರಿ ಪಡಿಸಿಕೋಳ್ಳಬಹುದು. ವಿವಿಪ್ಯಾಟ್ ನೊಳಗೆ ಅಭ್ಯರ್ಥಿಯ ಎರಡು ಭಾಷೆಯಲ್ಲಿ ಹೆಸರು, ಕ್ರಮ ಸಂಖ್ಯೆ, ಭಾವಚಿತ್ರ, ಚಿಹ್ನೆಯನ್ನು ಒಳಗೊಂಡ ಮುದ್ರಣ ರೂಪದ ಚೀಟಿ ನಮ್ಮ ಕಣ್ಣಿಗೆ ಗೋಚರಿಸುತ್ತದೆ ಈದೇ ರೀತಿಯಲ್ಲಿ ಅಭ್ಯರ್ಥಿ ಮತದಾನ ಮಾಡುವ ಮೂಲಕ ಮತ ಚಲಾಯಿಸಿ ಎಂದರು.
ಈ ಸಂಧರ್ಭದಲ್ಲಿ ಚುನಾವಣೆಯ ಶಿರಸ್ತೆದಾರ್ ಶಕುಂತಲಾ, ಪ್ರಕಾಶ್, ಕಂಪ್ಯೂಟರ್ ಆಪರೇಟರ್ ಓಬಳೇಶ್, ಹಾಗೂ ಸಾರ್ವಜನಿಕರು ಇದ್ದರು.